ಈ ಬಾರಿ ಮೀಟರ್ ರೀಡರ್ ಗಳು ಬರಲ್ಲ…! 3 ತಿಂಗಳ ಸರಾಸರಿ ಪರಿಗಣಿಸಿ ಗ್ರಾಹಕರಿಗೆ ಮುಂದಿನ ತಿಂಗಳು ವಿದ್ಯುತ್ ಬಿಲ್

ಬೆಂಗಳೂರು: ತಂತ್ರಾಂಶ ಉನ್ನತೀಕರಣ ಕಾರ್ಯ ಕೈಗೊಂಡ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಗ್ರಾಹಕರಿಗೆ ಕಳೆದ ಮೂರು ತಿಂಗಳ ಸರಾಸರಿ ಪರಿಗಣಿಸಿ ಮುಂದಿನ ತಿಂಗಳ ವಿದ್ಯುತ್ ಬಿಲ್ ನೀಡಲಾಗುವುದು.

ಬಿಲ್ಲಿಂಗ್ ತಂತ್ರಜ್ಞಾನದ ಸುಧಾರಣೆಗೆ ಬೆಸ್ಕಾಂ ಮಾಹಿತಿ ತಂತ್ರಜ್ಞಾನ ವಿಭಾಗ ಕೈಗೊಂಡ ಸಾಫ್ಟ್ವೇರ್ ಉನ್ನತಿ ಕಾರ್ಯವು ಪ್ರಗತಿಯಲ್ಲಿದೆ. ಹೀಗಾಗಿ ಅಕ್ಟೋಬರ್ 1ರಿಂದ 15ರ ವರೆಗಿನ ನಿಗದಿತ ಅವಧಿಯಲ್ಲಿ ಮೀಟರ್ ರೀಡರ್ ಗಳು ಜಿಬಿಎ ವ್ಯಾಪ್ತಿಯಲ್ಲಿ ಮೀಟರ್ ಮಾಪನಕ್ಕೆ ಬರುವುದಿಲ್ಲ. ಬದಲಿಗೆ ಗ್ರಾಹಕರಿಗೆ ಕಳೆದ ಮೂರು ತಿಂಗಳ ಸರಾಸರಿ ಲೆಕ್ಕ ಹಾಕಿ ವಿದ್ಯುತ್ ಬಿಲ್ ನೀಡಲಾಗುವುದು.

ಬೆಸ್ಕಾಂ ಮಿತ್ರ ಆಪ್, ಉಪವಿಭಾಗ ಕೇಂದ್ರ, ಯುಪಿಐ ಆಪ್ ಗಳ ಮೂಲಕ ಬಿಲ್ ಪಾವತಿಸಬಹುದಾಗಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಸರಾಸರಿ ಬಿಲ್ ನೀಡುವ ಪ್ರಕ್ರಿಯೆಯಿಂದ ಗೃಹಜ್ಯೋತಿ ಫಲಾನುಭವಿಗಳು ಲಾಭ ಪಡೆಯುವಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಬೆಸ್ಕಾಂನಿಂದ ಸ್ಪಷ್ಟಪಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read