ಹಾಸನ: ಸೋಮವಾರ ರಾತ್ರಿ ಸಂಭವಿಸಿದ ನಿಗೂಢ ಸ್ಫೋಟದಿಂದ ತೀವ್ರವಾಗಿ ಗಾಯಗೊಂಡಿದ್ದ ದಂಪತಿ ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆ ಆಲೂರು ಪಟ್ಟಣದ ಸಮೀಪ ಹಳೆಯ ಆಲೂರಿನಲ್ಲಿ ಸಂಭವಿಸಿದ ಸ್ಪೋಟದಿಂದ ಸುದರ್ಶನ್(32), ಕಾವ್ಯಾ(28) ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಝೀರೋ ಟ್ರಾಫಿಕ್ ನಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು.
ಸ್ಫೋಟದ ತೀವ್ರತೆಗೆ ಕಾವ್ಯಾ ಅವರ ಎರಡು ಕಾಲು ಸೀಳಿ ಹೋಗಿದ್ದು, ಸುದರ್ಶನ್ ಇಡೀ ದೇಹದ ಮೇಲ್ಮೈ ಸುಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸುದರ್ಶನ್, ಕಾವ್ಯಾ ಮೃತಪಟ್ಟಿದ್ದಾರೆ.
ನಾಡಾ ಜಲೇಟಿನ್ ಅನ್ನು ದಂಪತಿ ತಯಾರಿಸುವಾಗ ಸ್ಪೋಟ ಸಂಭವಿಸಿದೆ. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು, ವಿಶೇಷ ತನಿಕಾ ದಳ, ಬಾಂಬ್ ನಿಷ್ಕ್ರಿಯ ದಳ ಸಾಕ್ಷ್ಯ ಸಂಗ್ರಹಿಸಿ ತನಿಖೆ ಕೈಗೊಂಡಿವೆ.