ಮಂಗಳೂರು: ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯಸಭೆ ಸದಸ್ಯೆ ಸುಧಾ ಮೂರ್ತಿ ಅವರು ಹೂಡಿಕೆ ಬಗ್ಗೆ ಪ್ರಚಾರ ಮಾಡುವ ನಕಲಿ ವಿಡಿಯೋ ನಿಜವೆಂದು ನಂಬಿದ ಮಹಿಳೆಯೊಬ್ಬರು 9.10 ಲಕ್ಷ ರೂ. ಕಳೆದುಕೊಂಡಿದ್ದಾರೆ.
ನಿರ್ಮಲಾ ಸೀತಾರಾಮನ್ ಮತ್ತು ಸುಧಾ ಮೂರ್ತಿ ಅವರು ಹೂಡಿಕೆ ಬಗ್ಗೆ ಪ್ರಚಾರ ಮಾಡುವ ನಕಲಿ ವಿಡಿಯೋ ನೋಡಿದ ಮಹಿಳೆ ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿ ನೋಂದಣಿ ಮಾಡಿದ್ದಾರೆ. ಮೊಬೈಲ್ ಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, 20,664 ರೂಪಾಯಿ ಹೂಡಿಕೆ ಮಾಡಿದ್ದಾರೆ. ನಂತರ 8.9 ಲಕ್ಷ ರೂ. ಸೇರಿ 9.1 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.