ಬೆಂಗಳೂರು: ಕೊಲ್ಕತ್ತಾದ ಟಿಟಾಗರ್ ನಿಂದ ನಮ್ಮ ಮೆಟ್ರೋಗೆ ಐದನೇ ರೈಲು ಆಗಮಿಸಲಿದೆ. ನಾಳೆ ಬೆಳಗ್ಗೆ ಅಥವಾ ರಾತ್ರಿ ಹೆಬ್ಬಗೋಡಿ ಡಿಪೋಗೆ ರೈಲು ತಲುಪಲಿದೆ.
15ರಿಂದ 30 ದಿನಗಳ ವರೆಗೆ ಟ್ರಯಲ್ ರನ್ ನಡೆಯಲಿದೆ. ಟ್ರಯಲ್ ರನ್ ಯಶಸ್ವಿಯಾದ ನಂತರ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಐದನೇ ರೈಲು ಸಂಚಾರ ಆರಂಭಿಸಲಿದೆ. ಆರ್.ವಿ. ರಸ್ತೆ -ಬೊಮ್ಮಸಂದ್ರ ಮಾರ್ಗದಲ್ಲಿ ಐದನೇ ರೈಲು ಸಂಚರಿಸಲಿದೆ.
ಸದ್ಯ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ನಾಲ್ಕು ರೈಲು ಸಂಚರಿಸುತ್ತಿವೆ. ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಹಳದಿ ಮಾರ್ಗ ಉದ್ಘಾಟಿಸಿದ್ದರು.
ಹಳದಿ ಮಾರ್ಗದಲ್ಲಿ 19 ನಿಮಿಷಗಳಿಗೊಮ್ಮೆ ಮೆಟ್ರೋ ರೈಲು ಸಂಚರಿಸುತ್ತಿವೆ. ಐದನೇ ರೈಲು ಸಂಚಾರ ಆರಂಭವಾದರೆ 15 ನಿಮಿಷಕ್ಕೊಂದು ರೈಲು ಸಂಚರಿಸುವ ಸಾಧ್ಯತೆ ಇದೆ.