ರಾಜ್ಯದಲ್ಲಿ ಈಗಾಗಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಜಾರಿಯಲ್ಲಿದ್ದು, ಸಾರ್ವಜನಿಕರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆದಾರರನ್ನು ಕಾಯಬೇಕಾಗಿಲ್ಲ. ಆನ್‍ಲೈನ್‍ನಲ್ಲಿ ಸುಲಭ ವಿಧಾನದಲ್ಲಿ ಸ್ವತಃ ನಿಮ್ಮ ಮೊಬೈಲ್‍ನಲ್ಲಿ ಅರ್ಜಿ ಭರ್ತಿ ಮಾಡಬಹುದು.
ಸಾರ್ವಜನಿಕರು https://kscbcselfdeclaratioin.karnataka.gov.in ವೆಬ್‍ಸೈಟಿಗೆ ಭೇಟಿ ನೀಡಿ, ನಾಗರಿಕ ಎಂದು ಆಯ್ಕೆ ಮಾಡಬೇಕು. ಮೊಬೈಲ್ ನಂಬರ್ ಹಾಕಿ ಓಟಿಪಿ ಪಡೆದು, ನಮೂದಿಸಬೇಕು. ತದನಂತರ ಹೊಸ ಸಮೀಕ್ಷೆ ಆರಂಭಿಸಿ ಎಂದು ಆಯ್ಕೆ ಮಾಡಿ ನಿಮಗೆ ಕೊಟ್ಟಿರುವ ಯುಹೆಚ್‍ಐಡಿ ಅನ್ನು ನಮೂದಿಸಿ ಪರಿಶೀಲನೆ ಮಾಡಬೇಕು.
ಒಂದು ವೇಳೆ ಯುಹೆಚ್‍ಐಡಿ ಇಲ್ಲದಿದ್ದರೆ ಐ ಡೋಂಟ್ ಹ್ಯಾವ್ ಯುಹೆಚ್‍ಐಡಿ ಎಂದು ಕ್ಲಿಕ್ ಮಾಡಬೇಕು. ನಂತರ ಹೆಸ್ಕಾಂ ಐಡಿ ಸಂಖ್ಯೆಯನ್ನು ನಮೂದಿಸಿದ ನಂತರ ಸಮೀಕ್ಷೆಯಲ್ಲಿ ಭಾಗವಹಿಸುವವರ ಭಾವಚಿತ್ರವನ್ನು ಅಪ್ಲೋಡ್ ಮಾಡಬೇಕು.
ತದನಂತರ ಪಡಿತರ ಚೀಟಿ ಅಥವಾ ಆಧಾರ್ ಕಾರ್ಡ್‍ನ್ನು ಆಯ್ಕೆ ಮಾಡಬೇಕು. ಒಂದು ವೇಳೆ ಆಧಾರ್ ಕಾರ್ಡ್ ಆಯ್ಕೆ ಮಾಡಿದರೆ ಓಟಿಪಿ ಬರುತ್ತೆ ಅಥವಾ ಕ್ಯೂಆರ್ ಕೋಡ್ ಮುಖಾಂತರ ಫೇಸ್ ಕ್ಯಾಪ್ಚರ್‍ನ್ನು ಬಳಸಬಹುದು ನಂತರ ಗೆಟ್ ಡಾಟಾ ಅನ್ನು ಕ್ಲಿಕ್ ಮಾಡಿ ಮುಂದುವರೆಯಬೇಕು.
ಮನೆಯ ಮುಖ್ಯಸ್ಥನು ಇ ಕೆವೈಸಿ ನಂತರ ಮನೆಯ ಕುಟುಂಬದ ಸದಸ್ಯರನ್ನು ಸೇರಿಸಬೇಕು. ಸದಸ್ಯರನ್ನು ಸೇರಿಸಿ ಇ ಕೆವೈಸಿ ಪೂರ್ಣಗೊಳಿಸಿ, ರೇಷನ್ ಕಾರ್ಡ್‍ನಲ್ಲಿ ಇರುವ ವ್ಯಕ್ತಿ ಮೃತಪಟ್ಟಿದ್ದರೆ, ಮೃತ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇನ್ನುಳಿದ ಕುಟುಂಬದ ಸದಸ್ಯರನ್ನು ಸೇರಿಸಿದ ಮೇಲೆ ಕುಟುಂಬದ ಮುಖ್ಯಸ್ಥನನ್ನು ಆಯ್ಕೆ ಮಾಡಿ ಗುರುತಿಸಿ, ನಿಮ್ಮ ಸರ್ವೆಯನ್ನು ಪ್ರಾರಂಭ ಮಾಡಬೇಕು.
ಪ್ರತಿಯೊಬ್ಬರ ಮಾಹಿತಿಯನ್ನು ಪಡೆದ ನಂತರ ಕುಟುಂಬದ ದಾಖಲು ಮಾಡಬೇಕು. ಕೆಲವು ಪ್ರಶ್ನೆಗಳಿಗೆ ಉತ್ತರ ಸಲ್ಲಿಸಿ, ಮೇಲೆ ಕ್ಲಿಕ್ ಮಾಡಿ ನಂತರ ನೀವು ಸಲ್ಲಿಸಿದ ಮಾಹಿತಿಯನ್ನು ಮತ್ತೊಮ್ಮೆ ಪೂರ್ಣವಾಗಿ ನೋಡಬಹುದು. ಒಂದು ಹಾಳೆಯಲ್ಲಿ ನಾನು ಸ್ವಯಂ ಪ್ರೇರಣೆಯಿಂದ ಸಮೀಕ್ಷೆಯಲ್ಲಿ ಭಾಗವಹಿಸಿ ಎಲ್ಲಾ ನಿಖರವಾದ ಮಾಹಿತಿಯನ್ನು ನೀಡಿದ್ದೇನೆ ಎಂದು ಬರೆದು ಆ ಫೋಟೋವನ್ನು ತೆಗೆದು ಅಪ್ಲೋಡ್ ಮಾಡಬೇಕು. ಸಬ್‍ಮೀಟ್ ಮಾಡಿದ ನಂತರ ಅಪ್ಲಿಕೇಶನ್ ನಂಬರ್ ಸಿಗುತ್ತದೆ ಎಂದು ಧಾರವಾಡ ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.