ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಠಾಣೆಯ ಇನ್ ಸ್ಪೆಕ್ಟರ್ ಮುರಳಿ ಅವರಿಗೆ ರಾಜ್ಯ ಮಹಿಳಾ ಆಯೋಗದಿಂದ ನೋಟಿಸ್ ನೀಡಲಾಗಿದೆ.
2024ರಲ್ಲಿ ಜಮೀನು ವಿಚಾರವಾಗಿ ಯುವತಿ ಆತ್ಮಹತ್ಯೆ ಹೇಳಿಕೆ ನೀಡಿದ್ದಳು. ಯುವತಿಯನ್ನು ಕರೆದುಕೊಂಡು ಹೋಗಲು ಮಹಿಳಾ ಪೊಲೀಸರು ಬಂದಿದ್ದರು. ಮಹಿಳಾ ಪೊಲೀಸ್ ಸಿಬ್ಬಂದಿ ಜೊತೆಗೆ ಬರಲು ಯುವತಿ ನಿರಾಕರಿಸಿದ್ದಳು. ಈ ವೇಳೆ ತನಿಖಾಧಿಕಾರಿಯಾಗಿದ್ದ ಮಾದನಾಯಕನಹಳ್ಳಿ ಠಾಣೆ ಇನ್ ಸ್ಪೆಕ್ಟರ್ ಮುರಳಿ ಯುವತಿಯನ್ನು ಎಳೆದೊಯ್ದಿದ್ದರು.
ಯುವತಿಯನ್ನು ಮುರಳಿ ಎಳೆದೊಯ್ದಿದ್ದ ವಿಡಿಯೋ ನಿನ್ನೆ ವೈರಲ್ ಆಗಿತ್ತು. ಹಳೆ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಮುರಳಿ ಅವರಿಗೆ ನೋಟಿಸ್ ನೀಡಲಾಗಿದೆ. ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ವಿಡಿಯೋ ಆಧರಿಸಿ ನೋಟಿಸ್ ನೀಡಿದ್ದಾರೆ.