ಡಿಜಿಟಲ್ ಡೆಸ್ಕ್ : ಪಾಕಿಸ್ತಾನದ ವಿರುದ್ಧ ಗೆದ್ದ ಟೀಮ್ ಇಂಡಿಯಾ ಏಷ್ಯಾಕಪ್ ಟ್ರೋಫಿ ಪಡೆಯಲು ನಿರಾಕರಿಸಿತ್ತು. ಪಾಕಿಸ್ತಾನದ ಗೃಹ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ನಿರಾಕರಿಸಿದ್ದರಿಂದ ಹಲವು ಅನಿರೀಕ್ಷಿತ ಘಟನೆ ನಡೆದಿದೆ.
ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ನಿರಾಕರಿಸಿದ್ದರಿಂದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಟ್ರೋಫಿ ಜೊತೆ ಪರಾರಿಯಾಗಿದ್ದು, ಪಾಕ್ ನಗೆಪಾಟಲಿಗೆ ಗುರಿಯಾಗಿದೆ. ಇದರ ನಡುವೆ ಟೀಂ ಇಂಡಿಯಾ ಟ್ರೋಫಿ ಇಲ್ಲದೇ ಮೈದಾನದಲ್ಲಿ ಸಂಭ್ರಮಿಸಿ ಪಾಕ್ ಕ್ರಿಕೆಟಿಗರ ಹೊಟ್ಟೆ ಉರಿಸಿದೆ. ಇದೀಗ ಟೀಂ ಇಂಡಿಯಾ ಆಟಗಾರ ಸೂರ್ಯಕುಮಾರ್ ಯಾದವ್ ಇಮೋಜಿ ಮೂಲಕ ಸಂಭ್ರಮಿಸಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ನಾಯಕ ಸೂರ್ಯಕುಮಾರ್ ಯಾದವ್, “ಆಟ ಮುಗಿದ ಮೇಲೆ ನೆನಪಿನಲ್ಲಿ ಉಳಿಯುವುದು ಚಾಂಪಿಯನ್ಗಳೇ ಹೊರತು, ಟ್ರೋಫಿಯ ಚಿತ್ರವಲ್ಲ” ಎಂದು ಬರೆಯುವ ಮೂಲಕ, ತಮ್ಮ ತಂಡದ ಸಾಧನೆಯೇ ಅಂತಿಮ ಸತ್ಯ ಎಂಬುದನ್ನು ಸ್ಪಷ್ಟಪಡಿಸಿದರು.
Mohsin Naqvi’s drama after India refused to take the trophy from him embarrassed, he ran off the field. 🤡😂 #INDvPAK pic.twitter.com/ithdlkjxQP
— 𝐑𝐮𝐬𝐡𝐢𝐢𝐢⁴⁵ (@rushiii_12) September 28, 2025