ಬೀಚಿಂಗ್: ಲಂಚ, ಆಸ್ತಿ ಅಕ್ರಮ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾದ ಮಾಜಿ ಕೃಷಿ ಸಚಿವ ಟ್ಯಾಂಗ್ ರೆಂಜಿಯಾನ್ ಅವರಿಗೆ ಜಿಲಿನ್ ಪ್ರಾಂತ್ಯದ ನ್ಯಾಯಾಲಯ ಭಾನುವಾರ ಗಲ್ಲು ಶಿಕ್ಷೆ ವಿಧಿಸಿದೆ.
ಸರ್ಕಾರಿ ಸುದ್ದಿ ಸಂಸ್ಥೆ ‘ ಕ್ಸಿನ್ಹುವಾ’ ಈ ಬಗ್ಗೆ ವರದಿ ಮಾಡಿದೆ. 2007ರಿಂದ 2024ರವರೆಗೆ ಸರ್ಕಾರದ ಮಟ್ಟದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಟ್ಯಾಂಗ್ ರೆಂಜಿಯಾನ್ ಅವರ ಮೇಲೆ 37.6 ದಶಲಕ್ಷ ಡಾಲರ್ ಮೌಲ್ಯದ ನಗದು ಹಾಗೂ ಆಸ್ತಿ ಸಂಪಾದಿಸಿದ ಆರೋಪ ಕೇಳಿ ಬಂದಿದೆ.
ಅವರ ಮೇಲಿನ ಆರೋಪಗಳ ಕುರಿತಾಗಿ ಭ್ರಷ್ಟಾಚಾರ ನಿಗ್ರಹದಳ ತನಿಖೆ ನಡೆಸಿತ್ತು. ಚೀನಾದ ಕಮ್ಯುನಿಸ್ಟ್ ಪಕ್ಷವು ಆರೋಪದ ನಂತರ ಟ್ಯಾಂಗ್ ರೆಂಜಿಯಾನ್ ಅವರನ್ನು ಕಳೆದ ವರ್ಷ ನವೆಂಬರ್ ನಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಿದ್ದು, ವಿಚಾರಣೆ ನಡೆಸಿದ ಜಿಲಿನ್ ಪ್ರಾಂತ್ಯದ ನ್ಯಾಯಾಲಯ ಭಾನುವಾರ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.