ಬೆಂಗಳೂರು: ಮೀನಿಗೆ ಬಲೆ ಹಾಕಲು ಹೋಗಿ ಕೆರೆಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ಹೆಸರಘಟ್ಟ ಕೆರೆಯಲ್ಲಿ ನಡೆದಿದೆ.
ಆನಂದ್ (32) ಹಾಗೂ ಅನಂತ್ (27) ಮೃತ ದುರ್ದೈವಿಗಳು. ಮೀನಿಗೆ ಬಲೆ ಹಾಕಲು ಇಬ್ಬರೂ ತೆಪ್ಪದಲ್ಲಿ ತೆರಳಿದ್ದರು. ಕೆರೆ ಮಧ್ಯದಲ್ಲಿ ತೆಪ್ಪದ ಹುಟ್ಟು ಕೈ ತಪ್ಪಿ ಕೆರೆಗೆ ಬಿದ್ದಿದೆ. ಆನಂದ್ ಎಂಬಾತ ಕೆರೆಗೆ ಧುಮುಕಿ ತೆಪ್ಪವನ್ನು ಹಿಡಿದುಕೊಂಡಿದ್ದ. ಆನಂದನನ್ನು ಮೇಲೆತ್ತಲು ಹೋಗಿ ಅನಂತ್ ಕೂಡ ನೀರಿಗೆ ಬಿದ್ದಿದ್ದಾನೆ. ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಸೋಲದೇವನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.