ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ನಡಿಗಳು ಉಕ್ಕಿ ಹರಿಯುತ್ತಿದ್ದು, ಹಲವೆಡೆ ಪ್ರವಾಹವುಂಟಾಗಿದೆ. ಕಾಗಿಣಾ ನದಿಯ ಪ್ರವಾಹದಿಂದಾಗಿ ಉತ್ತರಾಧಿ ಮಠಕ್ಕೆ ನೀರು ನುಗ್ಗಿರುವ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ಉತ್ತರಾಧಿಮಠ ಹಾಗೂ ಸುತ್ತಮುತ್ತಲ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಉತ್ತರಾಧಿ ಮಠದ ಒಳಗೆ ಭಾರಿ ಪ್ರಮಾಣದಲ್ಲಿ ನೀರು ನಿಂತಿದೆ. ಕಾಗಿಣಾ ನದಿಯ ಪ್ರವಾಹದ ಅಬ್ಬರದಿಂದಾಗಿ ಉತ್ತರಾಧಿ ಮಠ ಜಲಾವೃತಗೊಂಡಿದ್ದು, ಜಯತೀರ್ಥರ ಮೂಲವೃಂದಾವನ ಮುಳುಗಡೆಯಾಗಿದೆ.
ಮಳಖೇಡ ಗ್ರಾಮ ಬಹುತೇಕ ಜಲಾವೃತಗೊಂಡು ನಡಿಯಂತಾಗಿದೆ. ಮತ್ತೊಂದೆಡೆ ಕಲಬುರಗಿಯಲ್ಲಿ ಭೀಮಾನದಿ ಅಬ್ಬರಕ್ಕೆ ಕೃಷಿ ಭೂಮಿ, ಬೆಳೆ ಸಂಪೂರ್ಣ ಜಲಾವೃತಗೊಂಡು ನಾಶವಾಗಿದೆ. ಮನೆಗಳಲ್ಲಿ ಅರ್ಧದಷ್ಟು ನೀರಿ ನಿಂತಿದ್ದು, ಸಂಕಷ್ಟ ಎದುರಾಗಿದೆ. ರೈತರು, ಗ್ರಾಮಸ್ಥರು ಊರನ್ನೆ ತೊರೆದಿದ್ದಾರೆ.