ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಜನ್-12 ಶೀಘ್ರದಲ್ಲಿಯೇ ಆರಂಭವಾಗಲಿದೆ. ಈಗಾಗಲೇ ಭಾರಿ ಸಿದ್ಧತೆಗಳು ಆರಂಭವಾಗಿವೆ. ಈನಡುವೆ ಕನ್ನಡ ಬಿಗ್ ಬಾಸ್ ಸೀಜನ್ ಗೆ ಯುವಕನೊಬ್ಬ ಬಾಂಬ್ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಈಬಾರಿ ನನ್ನನ್ನು ಬಿಗ್ ಬಾಸ್ ಸೀಜನ್ ಗೆ ಕರೆದಿಲ್ಲ ಅಂದ್ರೇ ಬಾಂಬ್ ಇಡುತ್ತೇನೆ ಎಂದು ಕಿಡಿಗೇಡಿ ಯುವಕನೊಬ್ಬ ಇನ್ ಸ್ಟಾಗ್ರಾಂ ನಲ್ಲಿ ವಿಡಿಯೋ ವೊಂದಲ್ಲು ಹರಿಬಿಟ್ಟು ಬೆದರಿಕೆಯೊಡ್ಡಿದ್ದಾನೆ. ವಿಡಿಯೀ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಯುವಕನಿಗೆ ಬಿಸಿಮುಟ್ಟಿಸಿದ್ದಾರೆ.
ಈ ಸಲ ನನ್ನನ್ನು ಬಿಗ್ ಬಾಸ್ ಗೆ ಕರೆಸಿಕೊಂಡುಲ್ಲ ಅಂದ್ರೇ ಬಾಂಬ್ ಇಟ್ಟು ಬಿಗ್ ಬಾಸ್ ನೇ ಹೋಗಿಸಿಬಿಡೀನಿ ಎಂದು ಯುವಕ ವಿಡಿಯೋದಲ್ಲಿ ಆವಾಜ್ ಹಾಕಿದ್ದಾನೆ. ಮಮ್ಮಿ ಅಶೋಕ್ ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ವೈರಲ್ ಆಗಿದೆ. ತಕ್ಷಣ ಎಚ್ಚೆತ್ತ ಕುಂಬಳಗೋಡು ಠಾಣೆ ಪೊಲೀಸರು ಯುವಕ ಅಶೋಕ್ ಎಂಬಾತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಯುವಕ ಫಾಲೋವರ್ಸ್ ಹೆಚ್ಚಾಗಲಿ ಎಂಬ ಕಾರಣ ಈ ರೀತಿ ಬೆದರಿಕೆ ಹಾಕಿದಂತೆ ವಿಡಿಯೋ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವಕನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.