SHOCKING NEWS: ತಾಯಿ ಎದುರಲ್ಲೇ 5 ವರ್ಷದ ಮಗನ ಶಿರಚ್ಛೇದ ಮಾಡಿದ ಕಿರಾತಕ!

ಭೋಪಾಲ್: ವ್ಯಕ್ತಿಯೊಬ್ಬ, ಮಹಿಳೆಯೊಬ್ಬರ 5 ವರ್ಷದ ಮಗನನ್ನು ಆಕೆಯ ಎದುರಲ್ಲೇ ಹತ್ಯೆಗೈದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಾನಸಿಕ ಅಸ್ವಸ್ಥನೊಬ್ಬ ಏಕಾಏಕಿ ಮನೆಗೆ ನುಗ್ಗಿ 5 ವರ್ಷದ ಬಾಲಕನ ಶಿರಚ್ಛೇದ ಮಾಡಿ ಹತ್ಯೆಗೈದಿದ್ದಾನೆ. ಮಗುವಿನ ತಾಯಿಯ ಕಣ್ಣೆದುರೇ ಈ ಕೃತ್ಯ ನಡೆಸಿದ್ದಾನೆ. ಮಗುವನ್ನು ಹತ್ಯೆಗೈಯ್ಯುವ ಮುನ್ನ ಆರೋಪಿ, ಅಂಗಡಿಯೊಂದಕ್ಕೆ ನುಗ್ಗಿ ಕಳ್ಲತನ ಮಾಡಲು ಯತ್ನಿಸಿದ್ದ ಎಂದು ತಿಳಿದುಬಂದಿದೆ.

ವಿಕಾಸ್ ಕೊಲೆಯಾದ ಐದು ವರ್ಷದ ಮಗು. ಪ್ರತ್ಯಕ್ಷದರ್ಶಿಗಳು ಹೇಳಿವ ಪ್ರಕಾರ ಆರೋಪಿ ಬೈಕ್ ನಲ್ಲಿ ಬಂದು ಏಕಾಏಕಿ ಮನೆಗೆ ನುಗ್ಗಿದವನೇ ಸಲಾಕೆಯಿಂದ ಬಾಲಕನ ಶಿರಚ್ಛೇದ ಮಾಡಿದ್ದಾನೆ. ಮಗುವಿನ ಪೋಷಕರ ಮೇಲೂ ಹಲ್ಲೆ ನಡೆಸಿದ್ದಾನೆ. ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿ ಬಂದಿದ್ದು, ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಬಾಲಕನ ಕುಟುಂಬಕ್ಕೆ ಯಾವುದೇ ಪರಿಚಿತನಲ್ಲ. ಏಕಾಏಕಿ ಮನೆಗೆ ನುಗ್ಗಿ ಈ ಕೃತ್ಯವೆಸಗಿದ್ದಾನೆ. ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಗ್ರಾಮಸ್ಥರು ಆತನನ್ನು ಹಿಡಿದು ಥಳಿಸಿದ ಏಟಿಗೆ ಆರೋಪಿ ಸಾವನ್ನಪ್ಪಿದ್ದಾನೆ. ಅಲ್ಲದೇ ಆತ ಓರ್ವ ಮಾನಸಿಕ ಅಸ್ವಸ್ಥನಾಗಿದ್ದ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read