ಡಿಜಿಟಲ್ ಡೆಸ್ಕ್ : ಹೊಸ ಹಾರರ್ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದು, ಚಿತ್ರದ ಟ್ರೇಲರ್ ರಿಲೀಸ್ ಆಗಿ ಸಿನಿಪ್ರಿಯರ ಗಮನ ಸೆಳೆದಿದೆ. ಹೊಸ ಹಿಂದಿ ಹಾರರ್ ಸಿನಿಮಾ ಥರ ಅಕ್ಟೋಬರ್ 21 ರಂದು ರಿಲೀಸ್ ಆಗಲಿದೆ.
ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಮತ್ತು ಪರೇಶ್ ರಾವಲ್ ಕೂಡ ನಟಿಸಿದ್ದಾರೆ.
ಈ ಚಿತ್ರದಲ್ಲಿ ಆಯುಷ್ಮಾನ್ ರಕ್ಷಕ ಅಲೋಕ್ ಪಾತ್ರದಲ್ಲಿ ನಟಿಸಿದ್ದಾರೆ. ರಶ್ಮಿಕಾ ತಡಾಕಾ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ತಮ್ಮ ಪೋಸ್ಟರ್ನಲ್ಲಿ ವಿಂಟೇಜ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ . ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಬಣ್ಣ ಹಚ್ಚಿದ ರಶ್ಮಿಕಾ ಮಂದಣ್ಣಗೆ ಸ್ಟಾರ್ ನಟಿಯಾಗಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ನಟಿಗೆ ಭಾರಿ ಅವಕಾಶಗಳು ಬರುತ್ತಿದೆ. ಅಲ್ಲದೇ ಹಲವು ಜಾಹೀರಾತುಗಳಲ್ಲೂ ನಟಿಸುವ ಮೂಲಕ ಭಾರಿ ಸಂಭಾವನೆ ಪಡೆಯುತ್ತಿದ್ದಾರೆ.