BREAKING: ರಿಷಬ್ ಶೆಟ್ಟಿ ‘ಕಾಂತಾರ ಚಾಪ್ಟರ್ 1’ ಚಿತ್ರಕ್ಕೆ ಮೈಸೂರ್ ಸ್ಯಾಂಡಲ್ ಸಹಯೋಗ

ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತರಾ ಚಾಪ್ಟರ್ 1’ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ.

ಈ ಚಿತ್ರಕ್ಕೆ ಸರ್ಕಾರಿ ಸ್ವಾಮ್ಯದ ಮೈಸೂರು ಸ್ಯಾಂಡಲ್ ಸೋಪ್ ಖ್ಯಾತಿಯ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮ ನಿಯಮಿತ ಸುಗಂಧ ಭಾಗಿದಾರ( ಫ್ರಾಗ್ರನ್ಸ್ ಪಾರ್ಟ್ನರ್) ಆಗಿ ಸಹ ಪ್ರಾಯೋಜಕತ್ವ ನೀಡಲಿದೆ.

ಬೃಹತ್ ಮತ್ತು ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ನಮ್ಮ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಅಧಿಕೃತ ಸುಗಂಧ ಪಾಲುದಾರರಾಗಿ ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ಜೊತೆಗಿನ ಈ ಸಹಯೋಗವು ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನವಾಗಿದೆ..

ಕಾಂತಾರ ಚಾಪ್ಟರ್- 1 ಜೊತೆ ಕೈಜೋಡಿಸಿದ ಮೈಸೂರು ಸ್ಯಾಂಡಲ್ ಸೋಪ್

ಸ್ಯಾಂಡಲ್ ವುಡ್ ಸಿನೆಮಾ ಮತ್ತು ನಮ್ಮ ಹೆಮ್ಮೆಯ ಸ್ಯಾಂಡಲ್ ವುಡ್ ಸೋಪ್ ಅದ್ಭುತ ಸಂಗಮ!

ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಕಾಂತಾರ ಅಧ್ಯಾಯ-1 – ಶ್ರೀ ರಿಷಭ್ ಶೆಟ್ಟಿ ಅಭಿನಯ ಚಿತ್ರಕ್ಕೆ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ – #KSDL ಸುಗಂಧ ಭಾಗಿದಾರ ಮತ್ತು ಸಹ-ಪ್ರಾಯೋಜಕತ್ವ ನೀಡಲಿದೆ.

7 ಭಾಷೆಗಳಲ್ಲಿ, ಭಾರತದ 7,000+ ತೆರೆಗಳ ಮೇಲೆ ಹಾಗೂ 30 ದೇಶಗಳ 6,500 ತೆರೆಗಳಲ್ಲೂ ಪ್ರದರ್ಶನವಾಗುತ್ತಿರುವ ಈ ಸಹಯೋಗವು ಕರ್ನಾಟಕದ ಪರಂಪರೆಯನ್ನು ವಿಶ್ವ ಮಟ್ಟದಲ್ಲಿ ಮತ್ತಷ್ಟು ಬೆಳಗಲಿದೆ.

ಶತಮಾನಕ್ಕೂ ಮೀರಿದ ಇತಿಹಾಸವುಳ್ಳ KSDL ಶುದ್ಧತೆ ಮತ್ತು ಗುಣಮಟ್ಟದ ಪ್ರತೀಕವಾಗಿ ನಿಂತಿದೆ. ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್ ಮತ್ತಷ್ಟು ಹಸನುಗೊಳಿಸಿದ್ದೇವೆ.  ಕಳೆದ ಎರಡು ವರ್ಷಗಳಲ್ಲಿ  ರಫ್ತು ವೇಗಗೊಳಿಸಿದ್ದೇವೆ.

ಈಗ ಸಿನಿಮಾ ಮೂಲಕ ಹೊಸ ಪ್ರೇಕ್ಷಕರನ್ನು ತಲುಪಿ, ಇನ್ನಷ್ಟು ಬಲಿಷ್ಠವಾಗುವ ಪ್ರಯತ್ನ ಮಾಡುತ್ತಿದ್ದೇವೆ.

KSDL ನ ಉತ್ಪನ್ನಗಳನ್ನು ಖರೀದಿ ಮಾಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಕೈ ಜೋಡಿಸಿ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read