ವಾಷಿಂಗ್ಟನ್ ಡಿಸಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ (ಸ್ಥಳೀಯ ಸಮಯ) ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಆಮದಿನ ಮೇಲೆ ಶೇಕಡಾ 100 ವರೆಗಿನ ಸುಂಕವನ್ನು ಘೋಷಿಸಿದ್ದಾರೆ.
ಈ ಸುಂಕಗಳು ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ. ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಖಾತೆಯಲ್ಲಿ ಈ ಕುರಿತು ಘೋಷಣೆ ಮಾಡಿದ್ದಾರೆ. “ಅಕ್ಟೋಬರ್ 1, 2025 ರಿಂದ, ಯಾವುದೇ ಬ್ರಾಂಡ್ ಅಥವಾ ಪೇಟೆಂಟ್ ಪಡೆದ ಔಷಧೀಯ ಉತ್ಪನ್ನದ ಮೇಲೆ ನಾವು ಶೇಕಡಾ 100 ರಷ್ಟು ಸುಂಕವನ್ನು ವಿಧಿಸುತ್ತೇವೆ, ಒಂದು ಕಂಪನಿಯು ಅಮೆರಿಕದಲ್ಲಿ ತನ್ನ ಔಷಧೀಯ ಉತ್ಪಾದನಾ ಘಟಕವನ್ನು ನಿರ್ಮಿಸದ ಹೊರತು,” ಎಂದು ಅಮೆರಿಕ ಅಧ್ಯಕ್ಷರು ಹೇಳಿದರು.
ಗಮನಾರ್ಹವಾಗಿ, ಅಮೆರಿಕದಲ್ಲಿ ತಯಾರಾಗುವ ಔಷಧ ಉತ್ಪನ್ನಗಳ ಮೇಲೆ ಯಾವುದೇ ಸುಂಕವಿರುವುದಿಲ್ಲ. “IS BUILDING ಅನ್ನು “ಬ್ಯುಲಿಂಗ್ ಗ್ರೌಂಡ್” ಮತ್ತು/ಅಥವಾ “ನಿರ್ಮಾಣ ಹಂತದಲ್ಲಿದೆ” ಎಂದು ವ್ಯಾಖ್ಯಾನಿಸಲಾಗುತ್ತದೆ. ನಿರ್ಮಾಣ ಕಾರ್ಯ ಪ್ರಾರಂಭವಾದರೆ ಈ ಔಷಧ ಉತ್ಪನ್ನಗಳ ಮೇಲೆ ಯಾವುದೇ ಸುಂಕವಿರುವುದಿಲ್ಲ. ಈ ವಿಷಯದ ಬಗ್ಗೆ ನಿಮ್ಮ ಗಮನಕ್ಕೆ ಧನ್ಯವಾದಗಳು!” ಎಂದು ಟ್ರಂಪ್ ಹೇಳಿದರು.
( @realDonaldTrump – Truth Social Post )
— Donald J Trump Posts TruthSocial (@TruthTrumpPost) September 26, 2025
( Donald J. Trump – Sep 25, 2025, 7:24 PM ET )
Starting October 1st, 2025, we will be imposing a 100% Tariff on any branded or patented Pharmaceutical Product, unless a Company IS BUILDING their Pharmaceutical Ma… pic.twitter.com/n1JH8fSa37