ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪುಡಿರೌಡಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ, ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ಮೇಲೆ ದಾಳಿ ನಡೆಸಿ, ಸಿಕ್ಕ ಸಿಕ್ಕ ವಾಹನಗಳನ್ನು ಜಖಂಗೊಳಿಸಿದ್ದಾರೆ.
ಲಾಂಗ್ ಹಿಡಿದು ರಸ್ತೆ ಬದಿ ನಿಲ್ಲಿಸುದ್ದ ವಾಹನಗಳ ಮೇಲೆ ಬೀಸಿ, ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಬೆಂಗಳೂರಿನ ಬ್ಯಾಡರಹಳ್ಳಿಯ ವಾಲ್ಮೀಕಿ ನಗರ ಹಾಗೂ ಎಪಿನಗರದ ಮುದ್ದಯ್ಯನಪಾಳ್ಯದಲ್ಲಿ ಈ ಘಟನೆ ನಡೆದಿದೆ. ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಅಟ್ಟಹಾಸ ಮೆರೆದಿದೆ. ಬಳಿಕ ಮಾದನಾಯಕನಹಳ್ಳಿಯಲ್ಲಿ ಚಾಲಕರೊಬ್ಬರ ಮೇಲೆ ಲಾಂಗ್ ಬೀಸಿ ಹಲ್ಲೆ ನಡೆಸಿದೆ.
ಅಲ್ಲಿದ್ದ ಲಾರಿ ಗಾಜುಗಳನ್ನು ಒಡೆದು ಹಾಕಿ, ಲಾರಿ ಚಾಲಕನಿಗೆ ಹಣಕ್ಕೆ ಬೇಡಿಕೆ ಇಟ್ಟಿದೆ. ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಪರ್ಸ್, ಮೊಬೈಲ್ ಕಿತ್ತುಕೊಂಡು ಗ್ಯಾಂಗ್ ಪರಾರಿಯಾಗಿದೆ. ಇನ್ನು ದೊಡ್ದಬಳ್ಲಪುರದ ಬಳಿಯೂ ಇದೇ ಗ್ಯಾಂಗ್ ವಾಹನಗಳ ಮೇಲೆ ಲಾಂಗ್ ಬೀಸಿ ಪುಂಡಾಟ ಮೆರೆದಿದೆ. ಸುಮಾರು 20 ವಾರಹನಗಳನ್ನು ಜಖಂಡ್ ಮಾಡಿ ಹುಚ್ಚಾಟ ನಡೆಸಿದೆ.
ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಠಾಣೆ ಪೊಲೀಸರು ಹಾಗೂ ದೊಡ್ಡಬಳಾಪುರ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.