ವಿಜಯನಗರ: ವಿಜಯನಗರ ಜಿಲ್ಲೆ ಖಾನಾಹೊಸಹಳ್ಳಿ ಗುಡೆಕೋಟೆ ಸಮೀಪದ ರಾಮದುರ್ಗದಲ್ಲಿ ಸಾವಿನಲ್ಲಿಯೂ ದಂಪತಿ ಒಂದಾಗಿದ್ದಾರೆ.
ಹೃದಯಾಘಾತದಿಂದ ಮೃತಪಟ್ಟಿದ್ದ ಪತಿ ಅಂತ್ಯಕ್ರಿಯೆ ಮುಗಿಸಿ ತವರು ಮನೆಗೆ ವಾಪಸ್ ಬಂದಿದ್ದ ಪತ್ನಿಯೂ 24 ಗಂಟೆಯೊಳಗೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಸಂಡೂರು ತಾಲೂಕಿನ ತೋಕೇನಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸಣ್ಣ ಹನುಮಂತಪ್ಪ(55) ಬುಧವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪತಿ ಅಗಲಿಕೆ ನೋವಿನಲ್ಲಿ ಪತ್ನಿ ಸುಜಾತಾ(50) ಗುರುವಾರ ಬೆಳಗಿನ ಜಾವ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಸಣ್ಣಹನುಮಂತಪ್ಪ, ಸುಜಾತಾ ಅವರ ಮದುವೆಯಾಗಿ 25 ವರ್ಷಗಳಾಗಿವೆ. ರಾಮದುರ್ಗದ ಸುಜಾತಾ ಅವರನ್ನು ಮದುವೆಯಾಗಿದ್ದ ಹನುಮಂತಪ್ಪ ಪತ್ನಿಯ ಊರಿನಲ್ಲೇ ವಾಸವಾಗಿದ್ದರು. ಪುತ್ರಿ ಸೇರಿ ಅಪಾರ ಬಂಧು ಬಳಗವನ್ನು ದಂಪತಿ ಅಗಲಿದ್ದಾರೆ.