ಕೊಚ್ಚಿ: ಐಷಾರಾಮಿ ಕಾರುಗಳು ಸೇರಿದಂತೆ ವಾಹನಗಳನ್ನು ಭೂತಾನ್ನಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಿ ತೆರಿಗೆ ಪಾವತಿಸದೆ ಮಾರಾಟ ಮಾಡಿದ ಪ್ರಕರಣದ ಬಗ್ಗೆ ಕಸ್ಟಮ್ಸ್ ಇಲಾಖೆ ತೀವ್ರ ತನಿಖೆಯನ್ನು ಪ್ರಾರಂಭಿಸಿದೆ.
ಇದೀಗ ನಟ ದುಲ್ಕರ್ ಸಲ್ಮಾನ್ ಮತ್ತು ಇತರರಿಗೆ ಖುದ್ದಾಗಿ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ದುಲ್ಕರ್ ಸಲ್ಮಾನ್ ಅವರಿಗೆ ಸೇರಿದ ಎರಡು ಕಾರುಗಳ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಮೂಡಿದ್ದು, ದುಲ್ಕರ್ ಅವರ ಎರಡು ಐಶಾರಾಮಿ ಕಾರುಗಳನ್ನು ಸೀಜ್ ಮಾಡಿದ್ದು, ದುಲ್ಕರ್ ಅವರಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ದುಲ್ಕರ್ ಅವರ ಮನೆಯಿಂದ ಟೊಯೊಟಾ ಲ್ಯಾಂಡ ಕ್ರ್ಯೂಸರ್, ಲಾಂಡ್ ರೋವರ್ ಡಿಫೆಂಡರ್ ಕಾರುಗಳನ್ನು ಸೀಜ್ ಮಾಡಿದ್ದಾರೆ. ಐಷಾರಾಮಿ ಕಾರುಗಳು ಸೇರಿದಂತೆ ವಾಹನಗಳನ್ನು ಭೂತಾನ್ನಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಿ ತೆರಿಗೆ ಪಾವತಿಸದೆ ಮಾರಾಟ ಮಾಡಿದ ಪ್ರಕರಣದ ಬಗ್ಗೆ ಕಸ್ಟಮ್ಸ್ ಇಲಾಖೆ ತೀವ್ರ ತನಿಖೆಯನ್ನು ಪ್ರಾರಂಭಿಸಿದೆ.