ಬೆಂಗಳೂರು : ಬೆಂಗಳೂರಲ್ಲಿ ‘ಕ್ರಿಕೆಟ್ ಕೋಚ್’ ಓರ್ವ ಸೆಕ್ಸ್ ಸ್ಕ್ಯಾಂಡಲ್ ನಡೆಸುತ್ತಿದ್ದ ಘಟನೆ ಬೆಳಕಿಗೆ ಬಂದಿದ್ದು, ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ವಿವಾಹಿತ ಮಹಿಳೆಯರೇ ಈತನ ಟಾರ್ಗೆಟ್ ಆಗಿದ್ದು, ಕೋಚ್’ ನ ಅಸಲಿ ಮುಖ ಅನಾವರಣವಾಗಿದೆ.
ದೈಹಿಕ ಶಿಕ್ಷಕ ಕಂ ಕ್ರಿಕೆಟ್ ಕೋಚ್ ನ ಕಾಮುಕ ಮುಖ ಅನಾವರಣವಾಗಿದೆ. ಕೇರಳ ಮೂಲದ ಕಾಮುಕ ಮ್ಯಾಥ್ಯೂ ಎಂಬ ಹಲವು ಮಹಿಳೆಯರ ಜೊತೆ ಮಲಗಿ ಅವರ ವಿಡಿಯೋ ಮಾಡಿ ಕಿರುಕುಳ ನೀಡುತ್ತಿದ್ದನು.
ತರಬೇತಿ ಪಡೆಯಲು ಕ್ಯಾಂಪ್ ಗೆ ಬರುತ್ತಿದ್ದ ಮಕ್ಕಳ ಪೋಷಕರನ್ನೇ ಟಾರ್ಗೆಟ್ ಮಾಡಿ ಕ್ಯಾಚ್ ಹಾಕಿಕೊಳ್ಳುತ್ತಿದ್ದನು. ಕೇರಳ ಮೂಲದ ಮ್ಯಾಥ್ಯೂ ಬನ್ನೇರುಘಟ್ಟ ರಸ್ತೆಯ ಖಾಸಗಿ ಶಾಲೆಯಲ್ಲಿ ಈತ ದೈಹಿಕ ಶಿಕ್ಷಕನಾಗಿದ್ದಾನೆ.ಹಲವರ ಜೊತೆ ನಗ್ನವಾಗಿ ವಿಡಿಯೋ ಮಾಡಿಕೊಂಡಿದ್ದಾನೆ. ಮದುವೆ ಆಗಿ ವಿಚ್ಚೇದನ ಆಗಿದ್ದ ಸಂತ್ರಸ್ತ ಮಹಿಳೆಗೆ ವಂಚನೆ ಎಸಗಿದ್ದಾನೆ. ಪರಿಚಯ ಮಾಡಿಕೊಂಡು ದೈಹಿಕ ಸಂಪರ್ಕ ಬೆಳೆಸಿದ ಮ್ಯಾಥ್ಯೂ ಮದುವೆಯಾಗುತ್ತೇನೆ ಎಂದು ನಂಬಿಸಿ ಗರ್ಭಿಣಿ ಮಾಡಿ ಕೈ ಕೊಟ್ಟಿದ್ದಾನೆ.ಮಹಿಳೆಯರ ಜೊತೆ ಖಾಸಗಿ ವಿಡಿಯೋ ಕೂಡ ಮಾಡಿಕೊಂಡಿದ್ದಾನೆ. ಈ ವಿಡಿಯೋಗಳನ್ನು ನೋಡಿ ಸಂತ್ರಸ್ತೆ ಶಾಕ್ ಆಗಿದ್ದಾರೆ.ಅಲ್ಲದೇ ಯುವತಿಯರ ಜೊತೆಗೂ ದೈಹಿಕ ಸಂಪರ್ಕ ಬೆಳೆಸಿರುವ ಆರೋಪವಿದೆ. ಸದ್ಯ ಕೋಣನಕುಂಟೆ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.