ಭಿಲ್ವಾರ: ರಾಜಸ್ಥಾನದ ಭಿಲ್ವಾರ ಜಿಲ್ಲೆಯ ಕಾಡಿನಲ್ಲಿ ಮಂಗಳವಾರ 15 ದಿನಗಳ ಶಿಶುವನ್ನು ಬಿಟ್ಟು ಹೋಗಿರುವುದು ಪತ್ತೆಯಾಗಿದೆ. ಆಘಾತಕಾರಿಯೆಂದರೆ ಮಗುವಿನ ಬಾಯಿಗೆ ಅಂಟು ಹಾಕಲಾಗಿದ್ದು, ಅಳುವುದನ್ನು ತಡೆಯಲು ಕಲ್ಲು ತುರುಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಡಲ್ ಗಢದ ಸೀತಾ ಕಾ ಕುಂಡ್ ದೇವಾಲಯದ ಬಳಿ ಶಿಶು ಪತ್ತೆಯಾಗಿದ್ದು, ಕಲ್ಲುಗಳ ರಾಶಿಯ ಬಳಿ ಶಿಶು ಬಿದ್ದಿರುವುದನ್ನು ಗಮನಿಸಿದ ಜಾನುವಾರು ಮೇಯಿಸುವವರು, ಮಗುವಿನ ಬಾಯಿಗೆ ಕಲ್ಲನ್ನು ಬಲವಂತವಾಗಿ ಇಟ್ಟು ಅಂಟು ಮುಚ್ಚಿರುವುದನ್ನು ಕಂಡಿದ್ದಾರೆ. ಕುರಿಗಾಹಿಗಳು ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಮಗುವಿನ ಬಾಯಿಯಿಂದ ಕಲ್ಲನ್ನು ತೆಗೆದು ಮಗುವನ್ನು ಬಿಜೋಲಿಯಾದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.
ಮಗುವಿಗೆ ಸುಮಾರು 15 ರಿಂದ 20 ದಿನಗಳ ವಯಸ್ಸಾಗಿದ್ದು, ಚಿಕಿತ್ಸೆ ಪಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಶುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ಮಗುವಿನ ಬಾಯಿ ಮತ್ತು ತೊಡೆಯ ಮೇಲೆ ಅಂಟಿಕೊಂಡ ಗುರುತುಗಳಿದ್ದವು. ವೈದ್ಯಕೀಯ ಆರೈಕೆಯಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.