ಬೆಂಗಳೂರು : ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಪೋಷಕರ ನಿರ್ಲಕ್ಷ್ಯಕ್ಕೆ ಮೂರು ನವಜಾತ ಶಿಶುಗಳು ಬಲಿಯಾಗಿದೆ.
ಬೆಂಗಳೂರು ನಗರ ಜಿಲ್ಲೆ ಅನೇಕಲ್ ತಾಲೂಕಿನ ಬನ್ನೇರುಘಟ್ಟ ಗೊಲ್ಲಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಮನೆಯವರ ವಿರೋಧದ ನಡುವೆ ಆನಂದ್ ಹಾಗೂ ಮಂಜುಳಾ ಪ್ರೀತಿಸಿ ಮದುವೆಯಾಗಿದ್ದರು. ಪೋಷಕರನ್ನು ಬಿಟ್ಟು ಪ್ರತ್ಯೇಕವಾಗಿ ಆನಂದ್ ಹಾಗೂ ಮಂಜುಳಾ ವಾಸವಾಗಿದ್ದರು.
ಸೂಕ್ತ ತಪಾಸಣೆ, ಪೋಷಣೆ ಇಲ್ಲದೇ ಮಂಜುಳಾ ಹೊಟ್ಟೆಯಲ್ಲೇ ಮಗು ಮೃತಪಟ್ಟಿದೆ. 6 ತಿಂಗಳಿಗೆ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದೆ. ಆಶಾ ಕಾರ್ಯಕರ್ತೆ ತಪಾಸಣೆ ಮಾಡಲು ಮಂಜುಳಾ ಅವರನ್ನು ಕರೆದರು ಬಾರದೇ ನಿರ್ಲಕ್ಷ್ಯ ಮಾಡಿದ್ದಾರೆ ಎನ್ನಲಾಗಿದೆ.ಸೂಕ್ತ ತಪಾಸಣೆ, ಪೋಷಣೆ ಇಲ್ಲದೇ ಮಂಜುಳಾ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿವೆ.