ಬೆಳಗಾವಿ: ವ್ಯಕ್ತಿಯೋರ್ವ ತನ್ನ ಒಂದು ಎಕರೆ ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೆಳೆದಿರುವ ಘಟನೆ ನಡೆದಿದ್ದು, ವಿಷಯ ತಿಳಿದು ದಾಳಿ ನಡೆಸಿದ ಪೊಲೀಸರು ಗಾಂಜಾ ಜಪ್ತಿ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿಂಗಾಡಿ ಮಾಳಪ್ಪ ಹಿರೇಕೋಡಿ (45) ಎಂಬಾತ ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೆಳೆ ಬೆಳೆದಿದ್ದಾನೆ. ಬೆಳಗಾವಿ ಹಾಗೂ ರಾಯಬಾಗ ಠಾಣೆ ಪೊಲೀಸರು ಜಂಟಿ ಕಾರ್ಯಾಚಾರಣೆ ನಡೆಸಿ 22 ಲಕ್ಷ ಮೌಲ್ಯದ ೪೪೧ ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಆರೋಪಿ ಸಿಂಗಾಡಿ ಮಾಳಪ್ಪನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.