ನವದೆಹಲಿ : ಕೃಷಿಯಲ್ಲಿ ಕೂಲಿಯಾಳುಗಳ ಕೊರತೆಯಿಂದ ಔಷಧ ಸಿಂಪಡನೆಯೇ ಸವಾಲಾಗಿರುವ ಸಂದರ್ಭದಲ್ಲಿ ಡ್ರೋನ್ ಮೂಲಕ ಔಷಧ ಸಿಂಪಡಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಪೂರಕವಾಗಿ ಮೋದಿ ಸರ್ಕಾರದ ಡ್ರೋನ್ ದೀದಿ ಯೋಜನೆಯು ರೈತರಿಗೆ ನೆರವಾಗುತ್ತಿದೆ ಎಂದು ಬಿಜೆಪಿ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
ಡ್ರೋನ್ ಮೂಲಕ ಕೇವಲ 5 ರಿಂದ 6 ನಿಮಿಷದೊಳಗೆ ಸುಮಾರು 1 ಎಕರೆಗೆ ಔಷಧ ಸಿಂಪಡಣೆ ಸಾಧ್ಯವಾಗುತ್ತದೆ. ಇಲ್ಲಿ ಔಷಧ, ಗೊಬ್ಬರ ಸಿಂಪಡಣೆ ಮಾಡಲು ದಿನವಿಡೀ ಬೆನ್ನು ಮೇಲೆ ಟ್ಯಾಂಕ್ ಹೊತ್ತು ಔಷಧ ಸಿಂಪಡಣೆ ಮಾಡಬೇಕಾಗಿಲ್ಲ. ಡ್ರೋನ್ ಬಳಕೆಯಿಂದ ಸಮಯ ಉಳಿಯುತ್ತದೆ, ಔಷಧಿಯೂ ವ್ಯರ್ಥವಾಗದೆ ಉಳಿತಾಯವಾಗುತ್ತದೆ.
ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಈ ಡ್ರೋನ್ ದೀದಿ ಯೋಜನೆಯಡಿ ಮಹಿಳೆಯರು ಶೇ. 80 ರಷ್ಟು ಸಬ್ಸಿಡಿ ಪಡೆಯಬಹುದಾಗಿದೆ. ಇದು ಗ್ರಾಮೀಣ ಭಾಗದ ಮಹಿಳೆಯರ ಜೀವನೋಪಾಯಕ್ಕೆ ಹೊಸ ಅವಕಾಶಗಳನ್ನು ತೆರೆದಿದ್ದು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಗ್ರಾಮೀಣ ಆರ್ಥಿಕತೆಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕೃಷಿಯಲ್ಲಿ ಕೂಲಿಯಾಳುಗಳ ಕೊರತೆಯಿಂದ ಔಷಧ ಸಿಂಪಡನೆಯೇ ಸವಾಲಾಗಿರುವ ಸಂದರ್ಭದಲ್ಲಿ ಡ್ರೋನ್ ಮೂಲಕ ಔಷಧ ಸಿಂಪಡಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಪೂರಕವಾಗಿ ಮೋದಿ ಸರ್ಕಾರದ ಡ್ರೋನ್ ದೀದಿ ಯೋಜನೆಯು ರೈತರಿಗೆ ನೆರವಾಗುತ್ತಿದೆ.
— BJP Karnataka (@BJP4Karnataka) September 22, 2025
ಡ್ರೋನ್ ಮೂಲಕ ಕೇವಲ 5 ರಿಂದ 6 ನಿಮಿಷದೊಳಗೆ ಸುಮಾರು 1 ಎಕರೆಗೆ ಔಷಧ ಸಿಂಪಡಣೆ ಸಾಧ್ಯವಾಗುತ್ತದೆ.… pic.twitter.com/ySBTGKCzoy