BREAKING : ‘ಮೈಸೂರು ದಸರಾ’ ಉದ್ಘಾಟಕಿ ‘ಬಾನು ಮುಷ್ತಾಕ್’ ಭಾಷಣದ ಮುಖ್ಯಾಂಶಗಳು ಹೀಗಿದೆ |WATCH VIDEO

ಮೈಸೂರು : ಸಾಹಿತಿ ‘ಬಾನು ಮುಷ್ತಾಕ್’ ಇಂದು ಮೈಸೂರು ದಸರಾ ಉದ್ಘಾಟನೆ ಮಾಡಿದ್ದು, ನಂತರ ಭಾಷಣ ಮಾಡಿದ್ದಾರೆ. ಚಾಮುಂಡೇಶ್ವೇರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಅವರು ದಸರಾ ಹಬ್ಬಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ತಾಯಿ ಚಾಮುಂಡೇಶ್ವರಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ. ಇದು ನನ್ನ ಜೀವನದ ಅತ್ಯಂತ ಗೌರವದ ಕ್ಷಣ, ತಾಯಿ ಚಾಮುಂಡಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ, ನನಗೆ ಬೂಕರ್ ಪ್ರಶಸ್ತಿ ಬಂದಾಗ ನನ್ನ ಸ್ನೇಹಿತೆ ಒಬ್ಬರು ಇಲ್ಲಿಗೆ ಕರೆದುಕೊಂಡು ಬರುವುದಾಗಿ ಹೇಳಿದ್ದರು. ಆದರೆ ಆ ತಾಯಿಯೇ ತನ್ನನ್ನು ಕರೆಸಿಕೊಂಡಿದ್ದಾಳೆ ಎಂದರು. ನಾಳೆ ನನ್ನ ಒಂದು ಪುಸ್ತಕ ಬಿಡುಗಡೆ ಆಗುತ್ತಿದೆ. ನನಗೂ ಹಾಗೂ ಹಿಂದೂ ಧರ್ಮಕ್ಕೆ ಇರುವ ಸಂಬಂಧದ ಬಗ್ಗೆ ಪುಸ್ತಕದಲ್ಲಿ ಬರೆದಿದ್ದೇನೆ . ಎಲ್ಲರೂ ಓದಿ ಎಂದರು .

ಮೈಸೂರಿನ ಅರಸರು ಮುಸ್ಲಿಮರ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದರು. ನನ್ನ ಸಂಬಂಧಿ ಒಬ್ಬರು ನನಗೆ ಮಾವ ಆಗಬೇಕು, ಅವರು ಮೈಸೂರು ಮಹಾರಾಜರ ಅಂಗರಕ್ಷಕ ಪಡೆಯ ಸೈನಿಕರಾಗಿದ್ದರು. ಮುಸ್ಲಿಮರ ಬಗ್ಗೆ ಅನುಮಾನ ಪಡದೇ ಅವರನ್ನು ನಂಬಿ ಅಂಗರಕ್ಷಕ ಪಡೆಯ ಸದಸ್ಯರನ್ನಾಗಿ ಮಾಡಿಕೊಂಡಿದ್ದು ನನಗೆ ಬಹಳ ಹೆಮ್ಮೆಯ ವಿಷಯವಾಗಿದೆ ಎಂದರು.

ಆಕಾಶ ಭೂಮಿ ಯಾರನ್ನೂ ಕೂಡ ಬೇರ್ಪಡಿಸುವುದಿಲ್ಲ, ಆದ್ರೆ ಮನುಷ್ಯ ಮಾತ್ರ ಗಡಿಗಳನ್ನು ಹಾಕಿಕೊಳ್ಳುತ್ತಾನೆ. ನಾನು ನೂರಾರು ಕಾರ್ಯಕ್ರಮಗಳಲ್ಲಿ ದೀಪ ಬೆಳಗಿಸಿದ್ದೇನೆ. ಪುಷ್ಪಾರ್ಚನೆ ಮಾಡಿದ್ದೇನೆ. ನನಗೂ ಹಿಂದೂ ಧರ್ಮಕ್ಕೂ ಅವಿನಾಭಾವ ಸಂಬಂಧವಿದೆ ಎಂದಿದ್ದಾರೆ.

ತಾಯಿ ಚಾಮುಂಡಿ ಶಕ್ತಿಯ, ಧೈರ್ಯದ, ಮಮತೆಯ ಸಂಕೇತ. ನಮ್ಮೊಳಗಿನ ದ್ವೇಷ, ಅಸಹಿಷ್ಣತೆಯನ್ನು ನಾಶ ಮಾಡಲಿ. ದಸರಾ ಶಾಂತಿಯ ಹಬ್ಬ, ಇದು ಸರ್ವ ಜನಾಂಗದ ಶಾಂತಿಯ ತೋಟ. ಈ ನೆಲದ ಸುಗಂಧದ ಐಕ್ಯತೆ ಆಗಲಿ ಎಂದರು. ದಸರಾ ಕೇವಲ ಅಮೈಸೂರು, ನಾಡು, ದೇಶಕ್ಕೆ ಮಾತ್ರ ಸೀಮಿತವಾಗದೇ ಇಡೀ ಪ್ರಪಂಚದಾದ್ಯಂತ ನೆಲೆ ಕಂಡುಕೊಳ್ಳಲಿ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read