ಉಡುಪಿ: ಜಾತಿ ಗಣತಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಪೋಪ್ ಆಗಲು ಹೊರಟಿದ್ದಾರೆ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಮಾತನಾಡಿದ ಶಾಸಕ ಸುನಿಲ್ ಕುಮಾರ್, ಮುಲ್ಲಾ ಆಗಿದ್ದ ಸಿದ್ದರಾಮಯ್ಯ, ಈಗ ಫಾದರ್ ಆಗಲು ಹೊರಟಿದ್ದಾರೆ. ಸಿಎಂ ಕಚೇರಿ ಕ್ರೈಸ್ತ ಮಷಿನರಿಗಳ ನೆರಳಲ್ಲಿ ಕೆಲಸ ಮಾಡುತ್ತಿದೆ. ಕ್ರಿಶ್ಚಿಯನ್ ಜೊತೆ ಇರುವ 47 ಉಪಜಾತಿ ಪಟ್ಟಿ ಕೈಬಿಡದಿದ್ದರೆ ಆಯೋಗಕ್ಕೆ ಮುತ್ತಿಗೆ ಹಾಕುವ ದಿನ ಬರಬಹುದು ಎಂದು ಎಚ್ಚರಿಸಿದರು.
ಸಿಎಂ ಸಿದ್ದರಾಮಯ್ಯ ಕ್ರಿಶ್ಚಿಯನ್ ಗರ್ಭಗುಡಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕರ್ನಾಟಕದ ಪೋಪ್ ಆಗಲು ಹೊರಟಿದ್ದಾರೆ, ಫಾದರ್ ಸಿದ್ದರಾಮಯ್ಯ ಅವರ ಹಿಂದೆ ಯಾರದ್ದೋ ಓಲೈಕೆ ನಡೆದಿದೆ. ರಾಜ್ಯದ ಹಿತ ಅಡಗಿಲ್ಲ. ಸಾಮಾಜಿಕ ನ್ಯಾಯದ ಆಶಯವನ್ನು ಶಿಲುಬೆಗೆ ಏರಿಸಬೇಡಿ. ಮತಾಂತರಕ್ಕೆ ಕೈಹಾಕಿರುವುದು ದುರಂತ. ಫಾದರ್ ಸಿದ್ದರಮಯ್ಯನವರು ಕೆಲ ಶಾಸ್ತ್ರೀಯ ಅಧ್ಯಯನ ಮಾಡಬೇಕು. ಇವರು ಸಂವಿಧಾನವನ್ನು ಹೇಗೆ ಅರ್ಥಮಾಡಿಕೊಂಡಿದ್ದಾರೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.