ಇಂದು ಈ ವರ್ಷದ ಕೊನೆಯ ಸೂರ್ಯ ಗ್ರಹಣ ಸಂಭವಿಸಲಿದೆ. ಮಹಾಲಯ ಅಮಾವಾಸ್ಯೆ ದಿನದಂದು ಖಂಡಗ್ರಾಸ ಸೂರ್ಯಗ್ರಹಣ ಸಂಭವಿಸಲಿದೆ.
ಇಂದು ಖಗೋಳದಲ್ಲಿ ಮತ್ತೊಂದು ವಿಸ್ಮಯ ಸಂಭವಿಸಲಿದೆ. 15 ದಿನಗಳ ಅಂತರದಲ್ಲಿ ಸೂರ್ಯ ಗ್ರಹಣ, ಚಂದ್ರ ಗ್ರಹಣಕ್ಕೆ ಖಗೋಳ ಸಾಕ್ಷಿಯಾಗಿದೆ. ಇಂದು ರಾತ್ರಿ 11 ಗಂಟೆಯಿಂದ ಸೆಪ್ಟಂಬರ್ 22ರಂದು ಬೆಳಗಿನ ಜಾವ 3.34ರವರೆಗೆ ಸೂರ್ಯ ಗ್ರಹಣ ಗೋಚರವಾಗಲಿದೆ. ಆದರೆ ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ. ನ್ಯೂಜಿಲೆಂಡ್, ಅಂಟಾರ್ಟಿಕಾ, ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ಸೂರ್ಯಗ್ರಹಣ ಗೋಚರವಾಗಲಿದೆ.