ಬೆಂಗಳೂರು : ಗೋವಾದ ‘ಪುಂಡಾನೆ’ ಸೆರೆ ಹಿಡಿಯಲು ಗೋವಾ ಅರಣ್ಯ ಸಚಿವರು ಕರ್ನಾಟಕದ ಸಹಕಾರ ಕೋರಿದ್ದಾರೆ. ಈ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
”ಇಂದು ವಿಕಾಸಸೌಧದಲ್ಲಿ ಗೋವಾ ಅರಣ್ಯ ಸಚಿವರಾದ Vishwajit P RANE ಹಾಗೂ ಅವರ ನಿಯೋಗ ನನ್ನನ್ನು ಭೇಟಿಯಾಗಿ, ಗೋವಾದಲ್ಲಿ ಕೃಷಿಗೆ ಹಾನಿ ಮಾಡುತ್ತಿರುವ “ಓಂಕಾರ” ಎಂಬ ಪುಂಡಾನೆಯನ್ನು ಸೆರೆ ಹಿಡಿಯಲು ಕರ್ನಾಟಕದ ಸಹಕಾರವನ್ನು ಕೋರಿದರು.ಕರ್ನಾಟಕ ಅರಣ್ಯ ಇಲಾಖೆ ಆನೆ ಸೆರೆ ಕಾರ್ಯಚರಣೆಯಲ್ಲಿ ಪರಿಣತಿಯನ್ನು ಹೊಂದಿದ್ದು, ದಸರಾ ಮಹೋತ್ಸವದ ಬಳಿಕ ನಮ್ಮ ತಜ್ಞರು ಮತ್ತು ತಂಡ ಗೋವಾಕ್ಕೆ ತೆರಳಿ ಕಾರ್ಯಾಚರಣೆ ನಡೆಸುವ ಬಗ್ಗೆ ಭರವಸೆ ನೀಡಿದ್ದೇನೆ. ಆದರೆ ಕುಮ್ಕಿ ಆನೆಗಳನ್ನು ನೀಡುವುದಿಲ್ಲವೆಂಬುದನ್ನು ಸ್ಪಷ್ಟಪಡಿಸಿದೆನು.
ಇದೇ ಸಂದರ್ಭದಲ್ಲಿ, ಕಳಸಾ-ಬಂಡೂರಿ ಯೋಜನೆಗೆ ಗೋವಾ ಸರ್ಕಾರ ಸಹಕರಿಸಬೇಕೆಂದು ವಿನಂತಿಸಿದೆನು. ಅಭಿವೃದ್ಧಿ ಹಾಗೂ ಮೂಲಸೌಕರ್ಯ ವಿಚಾರದಲ್ಲಿ ನೆರೆಯ ರಾಜ್ಯಗಳು ಪರಸ್ಪರ ಔದಾರ್ಯದಿಂದ ಇರಬೇಕು ಎಂಬ ಅಭಿಪ್ರಾಯವನ್ನು ಹಂಚಿಕೊಂಡೆನು.ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವೆ ಉತ್ತಮ ಸಹಕಾರ ಮತ್ತು ಬಾಂಧವ್ಯವನ್ನು ವೃದ್ಧಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಸಚಿವ ಈಶ್ವರ್ ಖಂಡ್ರೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇಂದು ವಿಕಾಸಸೌಧದಲ್ಲಿ ಗೋವಾ ಅರಣ್ಯ ಸಚಿವರಾದ ಶ್ರೀ @visrane ಹಾಗೂ ಅವರ ನಿಯೋಗ ನನ್ನನ್ನು ಭೇಟಿಯಾಗಿ, ಗೋವಾದಲ್ಲಿ ಕೃಷಿಗೆ ಹಾನಿ ಮಾಡುತ್ತಿರುವ “ಓಂಕಾರ” ಎಂಬ ಪುಂಡಾನೆಯನ್ನು ಸೆರೆ ಹಿಡಿಯಲು ಕರ್ನಾಟಕದ ಸಹಕಾರವನ್ನು ಕೋರಿದರು.
— Eshwar Khandre (@eshwar_khandre) September 20, 2025
ಕರ್ನಾಟಕ ಅರಣ್ಯ ಇಲಾಖೆ ಆನೆ ಸೆರೆ ಕಾರ್ಯಚರಣೆಯಲ್ಲಿ ಪರಿಣತಿಯನ್ನು ಹೊಂದಿದ್ದು, ದಸರಾ ಮಹೋತ್ಸವದ ಬಳಿಕ ನಮ್ಮ… pic.twitter.com/uVg6Ikf9P2