ಬೆಂಗಳೂರಿನ ‘ಕೆಎಲ್ಇ’ ಕಾಲೇಜಿನಲ್ಲಿ EUPHORIA 7.0 : ಧನ್ಯಾ  ರಾಮ್ ಕುಮಾರ್ ಸೇರಿ ‘ಸ್ಟಾರ್ಸ್’ ಮೆರುಗು.!

ಬೆಂಗಳೂರು : ಬೆಂಗಳೂರಿನ ನಾಗರಬಾವಿಯಲ್ಲಿರುವ ಕೆಎಲ್ಇ ಸೊಸೈಟಿ ಮಹತ್ವದ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. 300ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಕೆಎಲ್ಇ ಸಂಸ್ಥೆಯ ಡಿಗ್ರೀ ಕಾಲೇಜಿನಲ್ಲಿ ಸ್ಪೆಷಲ್ ಕಾರ್ಯಕ್ರಮ ನಡೆಯಿತು. ಡಿಪಾರ್ಟ್ಮೆಂಟ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಸಹಯೋಗದಲ್ಲಿ ಇದೇ ತಿಂಗಳ ಸೆಪ್ಟೆಂಬರ್ 17 ಹಾಗೂ 18ರಂದು ಯುಫೋರಿಯಾ 7.O ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದ್ದು, ವಿದ್ಯಾರ್ಥಿಗಳೇ ಮುಂದಾಳತ್ವ ವಹಿಸಿದ್ದು ಎಲ್ಲರ ಗಮನ ಸೆಳೆಯಿತು.

ಪ್ರತಿಬಾರಿಯಂತೆ ಈ ಬಾರಿಯೂ EUPHORIA ಕಾರ್ಯಕ್ರಮ SEVEN SPIRITS, INFINITE VIBES ಎಂಬ ಧ್ಯೇಯ ವಾಕ್ಯದಡಿ ನಡೆಯಿತು. ವ್ಯವಹಾರ ಆಡಳಿತ ವಿಭಾಗದ THVAM ವಿದ್ಯಾರ್ಥಿ ಪರಿಷತ್ತಿನ ನೇತೃತ್ವದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮವನ್ನು ಸಂಸ್ಥೆಯ ಸಪ್ತ ರಿಷಿಗಳಾದ ಹೆಮ್ಮೆಯ 7 ಸಂಸ್ಥಾಪಕರಿಗೆ ಸಮರ್ಪಿಸಲಾಯಿತು. 1916ಯಲ್ಲಿ ಕೆಎಲ್ಇ ಸ್ಥಾಪಿಸಿದ ಸಪ್ತ ರಿಷಿಗಳಾದ ಶ್ರೀ ಪ್ರೊ. ಎಸ್.ಎಸ್. ಬಸವ್ನಾಲ್, ಶ್ರೀ ಪ್ರೊ. ಎಂ.ಆರ್. ಸಖಾರೆ, ಶ್ರೀ. ಬಿ.ಬಿ. ಮದಾಪುರ, ಶ್ರೀ ಡಾ.ಎಚ್.ಎಫ್. ಕಟ್ಟಿಮನಿ, ಶ್ರೀ ಪ್ರೊ. ಬಿಎಸ್ ಹಂಚಿನಾಲ್, ಶ್ರೀ ಪ್ರೊ. ಪಿ.ಆರ್. ಚಿಕ್ಕೋಡಿ ಹಾಗೂ ಶ್ರೀ ಸರ್ದಾರ್ ವಿ.ವಿ. ಪಾಟೀಲ್ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.

ಈ ಸಂಸ್ಥೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ, ಆರೋಗ್ಯ, ಸಂಶೋಧನೆ ಮೂಲಕ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ.. ಅಂಥವರ ಬಾಳಿಗೆ ಬೆಳಕಾದ 7 ಸಂಸ್ಥಾಪಕರಿಗೆ ಗೌರವ ಸಮರ್ಪಿಸುವುದರ ಜೊತೆಗೆ ಅವರ ತತ್ವ, ಮಾರ್ಗದರ್ಶನವನ್ನು ಮತ್ತಷ್ಟು ಪಸರಿಸಿ ಮುಂದುವರಿಸಿಕೊಂಡು ಹೋಗುವುದು ಈ EUPHORIA 7.O ಉದ್ದೇಶವಾಗಿತ್ತು.. ಮ್ಯಾನೇಜ್ಮೆಂಟ್ ವಿಭಾಗ, ಕ್ರೀಡೆಗಳ ವಿಭಾಗ, ಕಲೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಭಾಗ ಎಂಬ 4 ಕೆಟಗರಿಗಳಲ್ಲಿ ನಡೆದ ಈ ಅತಿದೊಡ್ಡ ಸಮಾರಂಭವು ಫ್ಯಾಷನ್ ಶೋ, ನಾಟಕ ಸೇರಿದಂತೆ 15 ರೀತಿಯ ವಿವಿಧ ಕಾರ್ಯಕ್ರಮಗಳ ಮೂಲಕ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ನಟಿ ಧನ್ಯಾ ರಾಮ್ಕುಮಾರ್, ನಟರಾದ ಪ್ರಣಮ್ ದೇವರಾಜ್, ಬಿಗ್ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಹಾಗೂ ನಿರ್ದೇಶಕ ಮತ್ತು ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ರು.. ಇನ್ನುಳಿದಂತೆ ಪ್ರಾಂಶುಪಾಲರಾದ ಡಾ. ಮದನ್ಕುಮಾರ್ ಆರ್., ಬಿಬಿಎ ಕೋ ಆರ್ಡಿನೇಟರ್ ಪ್ರೊಫೆಸರ್ ಕಲ್ಪನಾ ಮಲ್ಲಿಕಾರ್ಜುನ, ಸಂಘಟನಾ ಕಾರ್ಯದರ್ಶಿಗಳಾದ ಪ್ರೊಫೆಸರ್ ಗಾಯತ್ರಿ ರಾವ್ ಎನ್. ಹಾಗೂ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read