ಧಾರವಾಡ: ಯೂಟ್ಯೂಬರ್ ಕ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಸುಳ್ಳು ರಹವಾಸಿ ದಾಖಲೆ ನೀಡಿ ಹಿಂದೂ ಯುವತಿ ಪುಸಲಾಯಿಸಿ ಮದುವೆಯಾಗಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.
ಇಸ್ಲಾಂ ಧರ್ಮಕ್ಕೆ ಸೇರಿದ ಕ್ವಾಜಾ ಶಿರಹಟ್ಟಿ ಉರುಫ್ ಮುಕಳೆಪ್ಪ ಹೆಬ್ಬಳ್ಳಿ ಫಾರ್ಮ ನಿವಾಸಿಯಾಗಿದ್ದು, ಉದ್ದೇಶಪೂರ್ವಕವಾಗಿ ಮುಂಡಗೋಡ ಗಾಂಧಿನಗರ ನಿವಾಸಿ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಕಳೆದ ಜೂನ್ 5 ರಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹಿಂದೂ ಯುವತಿ ಮದುವೆಯಾಗಿದ್ದಾರೆ ಎಂದು ದೂರು ನೀಡಲಾಗಿದೆ.
ಪೊಲೀಸರು ಕ್ವಾಜಾ ಶಿರಹಟ್ಟಿ ಮತ್ತು ಯುವತಿಯನ್ನು ಕರೆಸಿ ವಿಚಾರಣೆ ನಡೆಸಿದ್ದು, ಇಬ್ಬರೂ ಸಮ್ಮತಿಯಿಂದಲೇ ಮದುವೆಯಾಗಿರುವುದಾಗಿ ತಿಳಿಸಿದ್ದಾರೆನ್ನಲಾಗಿದೆ.