BREAKING: ಮಣಿಪುರದಲ್ಲಿ ಸೇನಾ ವಾಹನ ಮೇಲೆ ಶಸ್ತ್ರಸಜ್ಜಿತರ ದಾಳಿ: ಇಬ್ಬರು ಯೋಧರು ಹುತಾತ್ಮ, ನಾಲ್ವರಿಗೆ ಗಾಯ

ಬಿಷ್ಣುಪುರ: ಮಣಿಪುರದ ಬಿಷ್ಣುಪುರದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ವಾಹನದ ಮೇಲೆ ದಾಳಿ ನಡೆಸಿದ ಪರಿಣಾಮ ಇಬ್ಬರು ಅಸ್ಸಾಂ ರೈಫಲ್ಸ್ ಯೋಧರು ಹುತಾತ್ಮರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಜಿಲ್ಲೆಯ ನಂಬೋಲ್ ಸಬಲ್ ಲೈಕೈ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಣಿಪುರದ ಬಿಷ್ಣುಪುರದಲ್ಲಿ ಅರೆಸೈನಿಕ ವಾಹನದ ಮೇಲೆ ಶಸ್ತ್ರಸಜ್ಜಿತ ವ್ಯಕ್ತಿಗಳು ದಾಳಿ ನಡೆಸಿದ ನಂತರ ಇಬ್ಬರು ಅಸ್ಸಾಂ ರೈಫಲ್ಸ್ ಯೋಧರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ.

ಇಂಫಾಲ್‌ನಿಂದ ಬಿಷ್ಣುಪುರ ಜಿಲ್ಲೆಯ ಕಡೆಗೆ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಬಂದೂಕುಧಾರಿಗಳ ಗುಂಪೊಂದು ಹೊಂಚು ಹಾಕಿ ದಾಳಿ ನಡೆಸಿದ್ದಾರೆ. ಗಾಯಾಳುಗಳನ್ನು ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಮಣಿಪುರದಲ್ಲಿ ಆರು ಉಗ್ರರ ಬಂಧನ

ಗುರುವಾರದ ಮೊದಲು ಭದ್ರತಾ ಪಡೆಗಳು ಇಂಫಾಲ್ ಕಣಿವೆಯ ಮೂರು ಜಿಲ್ಲೆಗಳಿಂದ ಹಲವಾರು ಸಂಘಟನೆಗಳಿಗೆ ಸೇರಿದ ಆರು ಉಗ್ರರನ್ನು ಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಷೇಧಿತ ಕಾಂಗ್ಲೈಪಾಕ್ ಕಮ್ಯುನಿಸ್ಟ್ ಪಕ್ಷದ(ಪಿಡಬ್ಲ್ಯೂಜಿ) ಮೂವರು ಸಕ್ರಿಯ ಸದಸ್ಯರನ್ನು ಇಂಫಾಲ್ ಪಶ್ಚಿಮ ಜಿಲ್ಲೆಯ ಅವರ ಮನೆಗಳಿಂದ ಬಂಧಿಸಲಾಗಿದೆ. ಪೊಲೀಸರ ಹೇಳಿಕೆಯ ಪ್ರಕಾರ, ಅವರನ್ನು ಲೀಶಾಂಗ್ಥೆಮ್ ಟೊಂಡನ್ ಸಿಂಗ್ (34), ಲೀಶಾಂಗ್ಥೆಮ್ ಆನಂದ್ ಸಿಂಗ್ (34) ಮತ್ತು ಹೈಖಾಮ್ ಹೇಮಚಂದ್ರ ಸಿಂಗ್ (41) ಎಂದು ಗುರುತಿಸಲಾಗಿದೆ.

ಪೊಲೀಸರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read