ಬೆಂಗಳೂರು: ಪೋಲಿಸ್ ನೇಮಕಾತಿ ಬಗ್ಗೆ ಚರ್ಚೆ ನಡೆಸಲಾಗಿದೆ. ಸುಮಾರು 15000 ಪೊಲೀಸ್ ಪೇದೆಗಳ ಹುದ್ದೆ ಖಾಲಿ ಇದ್ದು ನೇಮಕಾತಿ ವೇಳಾಪಟ್ಟಿ ಮಾಡಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ಪೊಲೀಸರ ನೇಮಕಾತಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಡ್ರಗ್ ಪೆಡ್ಲರ್ ಗಳ ಜೊತೆಗೆ ನಂಟು ಹೊಂದಿದ್ದ 11 ಪೋಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ವಿಚಾರಣೆಯ ನಂತರ ಅವರನ್ನು ಹುದ್ದೆಯಿಂದ ವಜಾಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವರು ಹೇಳಿದ್ದಾರೆ.
ಡ್ರಗ್ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಡಿಸಿಪಿ ಹೊಣೆ. ಆ ಠಾಣಾ ವ್ಯಾಪ್ತಿಯ ಡಿಸಿಪಿ, ಇನ್ಸ್ಪೆಕ್ಟರ್ ಸಿಬ್ಬಂದಿ ಹೊಣೆಗಾರರಾಗಿರುತ್ತಾರೆ. ಅಧಿಕಾರಿಗಳು ಜವಾಬ್ದಾರಿ ತಗೊಂಡು ಕ್ರಮವಹಿಸಬೇಕು. ಹೊಣೆಗಾರಿಕೆ ನಿಗದಿ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.