BIG NEWS : ರಾಜ್ಯದ 186 ಖಾಸಗಿ ಆಸ್ಪತ್ರೆಗಳು ‘ಆರೋಗ್ಯ ಸಂಜೀವಿನಿ ಯೋಜನೆಗೆ’ ನೋಂದಾವಣೆ : ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು : ಈಗಾಗಲೇ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನ ವಿವಿಧ ಯೋಜನೆಯಡಿಯಲ್ಲಿ ಹಾಗೂ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರಡಿ ನೊಂದಾಯಿತಗೊಂಡಿರುವ ಖಾಸಗಿ ಆಸ್ಪತ್ರೆಗಳನ್ನು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ (KASS) “ಭಾವಿತ ನೊಂದಾವಣೆಗೆ (Deemed Empanelment) ಒಳಪಡಿಸಲು ಆದೇಶಿಸಲಾಗಿದೆ.

ಅದರಂತೆ, ಆಸ್ಪತ್ರೆಗಳು ಹೊಂದಿರಬೇಕಾದ ಮೂಲ ಸೌಕರ್ಯಗಳು ಹಾಗೂ ಇತರ ಮಾನದಂಡಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಪರಿಶೀಲಿಸಿಕೊಂಡು, ಆಸ್ಪತ್ರೆಗಳೊಂದಿಗೆ ಸೂಕ್ತ ಒಪ್ಪಂದ (MoU) ಮಾಡಿಕೊಳ್ಳುವ ಷರತ್ತಿಗೊಳಪಟ್ಟು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಇಚ್ಛೆ ವ್ಯಕ್ತಪಡಿಸಿರುವ ಅನುಬಂಧದಲ್ಲಿನ 186 ಆಸ್ಪತ್ರೆಗಳನ್ನು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಖಾಸಗಿ ನೊಂದಾವಣೆಗೊಳಿಸಲಾಗಿದೆ.ಸದರಿ ಅಧಿಸೂಚನೆಯನ್ನು ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 16 ಎಸ್ಎಂಆರ್ 2020, ದಿನಾಂಕ:02.04.2025 ರಲ್ಲಿ ನೀಡಿರುವ ಅಧಿಕಾರ ಪ್ರತ್ಯಾಯೋಜನೆಯ ಮೇರೆಗೆ ಹೊರಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read