BREAKING : ಬೆಂಗಳೂರಿನ ವಾಹನ ಸವಾರರೇ ಗಮನಿಸಿ : ‘ರಿಂಗ್ ರೋಡ್’ ನಲ್ಲಿ ಇಂದಿನಿಂದ 1 ವಾರ ಸಂಚಾರ ನಿರ್ಬಂಧ

ಬೆಂಗಳೂರು : ಹೆಚ್.ಎ.ಎಲ್ ಏರ್‌ಪೋರ್ಟ್ ಸಂಚಾರ ಪೊಲೀಸ್ ಠಾಣೆ ಸರಹದ್ದಿನ ಹೊರವರ್ತುಲ ರಸ್ತೆಯಲ್ಲಿನ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಂಬಂಧ ದಿನಾಂಕ:19.09.2025 ರಿಂದ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಈ ಕೆಳಕಂಡ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ ಎಂದು ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ದಿನಾಂಕ ಮತ್ತು ಸಮಯ : 19.09.2025 ರಿಂದ 26.09.2025ರವರೆಗೆ (ಒಂದು ವಾರ)
ವಾಹನ ನಿರ್ಬಂಧಿಸಲಾದ ರಸ್ತೆ ಮಾರ್ಗ

ಲೇ ಅರೇಬಿಯಾ, ಬಿರಿಯಾನಿ ಜೋನ್ ಮತ್ತು ಕ್ರೋಮ್ ಜಂಕ್ಷನ್ ಬಳಿ ಹೊರವರ್ತುಲ ರಸ್ತೆಯಿಂದ ಮಾರತ್ತಹಳ್ಳಿ-ಕಾಡುಬೀಸನಹಳ್ಳಿ ಸರ್ವಿಸ್ ರಸ್ತೆಗೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.

ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗ

ಮಹದೇವಪುರ ಕಾರ್ತಿಕ್ನಗರ ಕಡೆಯಿಂದ ಲೇ ಅರೇಬಿಯಾ ಮತ್ತು ಬಿರಿಯಾನಿ ಪಾಯಿಂಟ್ ಮೂಲಕ ಮಾರತ್ ಹಳ್ಳಿ – ಕಾಡುಬೀಸನಹಳ್ಳಿ ಸರ್ವಿಸ್ ರಸ್ತೆಗೆ ಸಂಚರಿಸುವ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ವಾಹನ ಸವಾರರು ಕಡ್ಡಾಯವಾಗಿ ಕಲಾಮಂದಿರದ ಬಳಿ ಸರ್ವಿಸ್ ರಸ್ತೆಗೆ ತೆರಳಿ ಮಾರತಹಳ್ಳಿ ಕಾಂತಿ ಸ್ವೀಟ್ಸ್ ಅಂಡರ್‌ಪಾಸ್ ಬಳಿ ಯು-ಟರ್ನ್ ತೆಗೆದುಕೊಂಡು, ಮಾರತ್ ಹಳ್ಳಿ ಸೇತುವೆಯ ಬಳಿ ಎಡಕ್ಕೆ ತಿರುಗಿ ಮುನ್ನೇಕೊಳಾಲ, ಕಾಡುಬೀಸನಹಳ್ಳಿ ಜಂಕ್ಷನ್, ಪಣತ್ತೂರು ಮತ್ತು ಕರಿಯಮ್ಮನ ಅಗ್ರಹಾರ ಕಡೆಗೆ ಹೋಗಲು ಸರ್ವಿಸ್ ರಸ್ತೆಯಲ್ಲಿ ಸಂಚರಿಸುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read