ನವದೆಹಲಿ : ಆನ್ ಲೈನ್ ನಲ್ಲಿ ಮತ ಅಳಿಸಲು ಸಾಧ್ಯವಿಲ್ಲ, ರಾಹುಲ್ ಗಾಂಧಿ ಮಾಡಿರುವ ಆರೋಪಗಳು ಸುಳ್ಳು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.
ರಾಹುಲ್ ಗಾಂಧಿ ಮಾಡಿದ ಆರೋಪಗಳು ತಪ್ಪಾಗಿದ್ದು, ಆಧಾರರಹಿತವಾಗಿವೆ. ಅವರು ಹೇಳಿದ ಹಾಗೆ ಆನ್ ಲೈನ್ ನಲ್ಲಿ ಮತ ಅಳಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ.
❌Allegations made by Shri Rahul Gandhi are incorrect and baseless.#ECIFactCheck
— Election Commission of India (@ECISVEEP) September 18, 2025
✅Read in detail in the image attached 👇 https://t.co/mhuUtciMTF pic.twitter.com/n30Jn6AeCr
ರಾಹುಲ್ ಗಾಂಧಿ ಆರೋಪ
ಕರ್ನಾಟಕದ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ. ಹಲವಾರು ನಕಲಿ ಮತದಾನಗಳು ನಡೆದಿವೆ. ಕಾಂಗ್ರೆಸ್ ಮತರಾರರನ್ನು ಟಾರ್ಗೆಟ್ ಮಾಡಿ ಮತಪಟ್ಟಿಯಿಂದ ಅವರ ಹೆಸರು ಡಿಲಿಟ್ ಮಾಡಿ ಬೇರೆ ರಾಜ್ಯಗಳಿಂದ ಬಂದು ನಕಲಿ ಮಾತದಾನ ಮಾಡಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಕಳೆದ ಬಾರಿ ನಕಲಿ ಮತದಾರರ ಪಟ್ಟಿ ಬಗ್ಗೆ ಹೇಳಿದ್ದೆ. ಈ ಬಾರಿ ಮತಗಳ್ಳತನ ಹೇಗೆ ಆಗಿದೆ ಹಾಗೂ ಯಾವರೀತಿ ನಕಲಿ ಮತದಾನ ಮಾಡಲಾಗಿದೆ ಎಂಬುದನ್ನು ವಿವರಿಸುತ್ತೇನೆ ಎಂದು ವಿವರಿಸಿದರು.ಕರ್ನಾಟಕದ ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಮತಗಳ್ಳತನವಾಗಿದೆ. ಹಲವಾರು ಕಾಂಗ್ರೆಸ್ ಮತದಾರರ ಹೆಸರನ್ನೇ ಮತಟ್ಟಿಯಿಂದ ಡಿಲಿಟ್ ಮಾಡಲಾಗಿದೆ. 2023ರ ಚುನಾವಣೆಯಲ್ಲಿ 6018 ವೋಟ್ ಗಳನ್ನು ಡಿಲಿಟ್ ಮಾಡಲಾಗಿದೆ. ಕಾಂಗ್ರೆಸ್ ಮತದಾರರನ್ನು ಟಾರ್ಗೆಟ್ ಮಾಡಿ ಈ ಕೃತ್ಯವೆಸಗಿದ್ದಾರೆ ಎಂದು ಹೇಳಿದ್ದಾರೆ.