ಬೆಂಗಳೂರು: ‘ವಯೋ ವಂದನ’ ಯೋಜನೆಯ ಮಾರ್ಗಸೂಚಿ ಅನುಸಾರ 70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯರಿಗೆ ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ’ ಅಡಿ ಚಿಕಿತ್ಸೆ ನೀಡಲು ಸರ್ಕಾರ ಅನುಮೋದನೆ ನೀಡಿದೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಪ್ರಯೋಜನ ಪಡೆಯಲು ವಯೋ ವಂದನ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಅರ್ಹ ಫಲಾನುಭವಿಗಳು ಆಧಾರ್ ಕಾರ್ಡ್ ಮತ್ತು ಪಿ.ಹೆಚ್.ಹೆಚ್. ರೇಷನ್ ಕಾರ್ಡ್ ಬಳಸಿಕೊಂಡು ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ.
ವಾರ್ಷಿಕ 5 ಲಕ್ಷ ರೂ. ಹೆಚ್ಚುವರಿ ಟಾಪ್ ಅಪ್ ಒದಗಿಸಲಾಗುವುದು. ಫಲಾನುಭವಿ ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಉಚಿತ ಚಿಕಿತ್ಸೆ ಪಡೆಯುತ್ತಿಲ್ಲ ಎಂದು ಘೋಷಿಸಬೇಕು. ಖಾಸಗಿ ವಿಮಾ ಪಾಲಿಸಿ ಹೊಂದಿದವರು, ನೌಕರರ ರಾಜ್ಯ ವಿಮಾ ಯೋಜನೆ ಫಲಾನುಭವಿಗಳು ಕೂಡ ಈ ಯೋಜನೆಗೆ ಅರ್ಹರಾಗಿರುತ್ತಾರೆ.