ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅರಣ್ಯ ಪ್ರದೇಶದಲ್ಲಿ ರಾಶಿ ರಾಶಿ ಮೂಳೆಗಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಸಂವನ್ ಬಂಧಿತ ಆರೋಪಿ. ಭಟ್ಕಳದ ಮಗ್ದುಂ ಕಾಲೋನಿ ನಿವಾಸಿ. ರಾಯನ್ ಹಾಗೂ ಸಂವನ್ ಗೋವುಗಳನ್ನು ಕಳ್ಳತನ ಮಾಡಿಕೊಂಡು ಬಂದು ಅವುಗಳ ಮಾಂಸ ಬೇರ್ಪಡಿಸಿ ಮಗ್ದುಂ ಅರಣ್ಯಪ್ರದೇಶದಲ್ಲಿ ಅವುಗಳ ಮೂಳೆಗಳನ್ನು ಎಸೆಯುತ್ತಿದ್ದರು.
ಬೆಳ್ನೆ ಸರ್ವೆ ನಂಬರ್ 74ರಲ್ಲಿ ಮೂಳೆಗಳ ರಾಶಿ ಪತ್ತೆಯಾಗಿತ್ತು. ರಾಶಿ ರಾಶಿ ಮೂಳೆಗಲು ಪತ್ತೆಯಾಗಿರುವ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ಸಿಪಿಐ ದಿವಾಕರ್ ನೇತೃತ್ವದ ತಂಡ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿಂದೆರೇ ರಾಯನ್ ನ್ನು ಬಂಧಿಸಲಾಗಿತ್ತು. ಇದೀಗ ಮತ್ತೋರ್ವ ಆರೋಪಿ ಮೊಹಮ್ಮದ್ ಸಂವನ್ ನನ್ನು ಬಂಧಿಸಲಾಗಿದೆ.