ಕೃಷಿ ಇಲಾಖೆಯ ಕೃಷೋನ್ನತಿ ಕೃಷಿ ವಿಸ್ತರಣೆ ಉಪ ಅಭಿಯಾನ(ಆತ್ಮ) ಯೋಜನೆಯಡಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ 1 ಹುದ್ದೆಯನ್ನು ಒಪ್ಪಂದದ ಆಧಾರದ ಮೇಲೆ 2025-26ನೇ ಸಾಲಿನ ಸೀಮಿತ ಅವಧಿಗೆ ವಿರಾಜಪೇಟೆ ತಾಲ್ಲೂಕಿನಲ್ಲಿ ಖಾಲಿ ಇರುವ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಬಿ ಎಸ್ಸಿ, ಎಂಎಸ್ಸಿ (ಕೃಷಿ /ತೋಟಗಾರಿಕೆ/ ಮೀನುಗಾರಿಗೆ/ಅರಣ್ಯ ರೇಷ್ಮೆ) ಹೊಂದಿರಬೇಕು. 1 ವರ್ಷ ಕೃಷಿ ವಿಸ್ತರಣಾ ಮತ್ತು ಸಂಬಂಧಿತ ಚಟುವಟಿಕೆಯಲ್ಲಿ ಅನುಭವ ಹಾಗೂ ಆಫಿಸ್‍ನಲ್ಲಿ ಪರಿಣತಿ ಹೊಂದಿರತಕ್ಕದ್ದು. 45 ವರ್ಷದೊಳಗಿರಬೇಕು. ಮಾಸಿಕ ಗೌರವ ಧನ ರೂ.25 ಸಾವಿರ ಆಗಿದೆ.
ಈ ಹುದ್ದೆಗೆ ಅರ್ಹರಿರುವ ಆಭ್ಯರ್ಥಿಗಳು ಸೆಪ್ಟೆಂಬರ್, 30 ರೊಳಗೆ ಕಚೇರಿ ವೇಳೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ಅರ್ಜಿಯನ್ನು ಸಲ್ಲಿಸುವಂತೆ ತಿಳಿಸಿದೆ, ಹೆಚ್ಚಿನ ಮಾಹಿತಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಆತ್ಮ ವಿಭಾಗ, ಕೊಡಗು ಜಿಲ್ಲೆ, ಮಡಿಕೇರಿ ಇವರನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.