ಬೀದರ್ : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, 3 ನೇ ಮಹಡಿಯಿಂದ ತಳ್ಳಿ ಮಗಳನ್ನೇ ಮಲತಾಯಿ ಹತ್ಯೆಗೈದ ಘಟನೆ ಬೀದರ್ ನಗರದ ಆದರ್ಶ ಕಾಲೋನಿಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನ 7 ವರ್ಷದ ಸಾನ್ವಿ ಎಂದು ಗುರುತಿಸಲಾಗಿದೆ. ರಾಧಾ ಎಂಬಾಕೆ ಈ ಕೃತ್ಯ ಎಸಗಿದ್ದಾಳೆ.
ಆಟ ಆಡಿಸುವ ನೆಪದಲ್ಲಿ ಬಾಲಕಿಯನ್ನ 3 ನೇ ಮಹಡಿಗೆ ಕರೆದುಕೊಂಡು ಹೋದ ರಾಧ ಅಲ್ಲಿಂದ ತಳ್ಳಿ ಕೊಲೆ ಮಾಡಿದ್ದಾಳೆ. ನಂತರ ಆಟವಾಡುವಾಗ ಆಕಸ್ಮಾತ್ ಆಗಿ ಬಿದ್ದಿದ್ದಾಳೆ ಎಂದು ಬಿಂಬಿಸಿದ್ದಾಳೆ.
ಆ.28 ರಂದು ಬಾಲಕಿ ತಂದೆ ಆಕಸ್ಮಾತ್ ಸಾವು ಎಂದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಮನೆಯ ಸಿಸಿಟಿವಿ ಪರಿಶೀಲಿಸಿದಾಗ ರಾಧಾ ಅನುಮಾನಾಸ್ಪವಾಗಿ ಓಡಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಪೊಲೀಸರಿಗೆ ರಾಧಾ ಮೇಲೆ ಇನ್ನಷ್ಟು ಅನುಮಾನ ಬಂದಿದೆ. ನಂತರ ಪೊಲೀಸರು ರಾಧಾಳನ್ನು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾನ್ವಿ ತಾಯಿ 6 ವರ್ಷದ ಹಿಂದೆ ಖಾಯಿಲೆಯಿಂದ ಮೃತಪಟ್ಟಿದ್ದರು, ನಂತರ ರಾಧಾಳನ್ನು ಬಾಲಕಿ ತಂದೆ ಮರು ಮದುವೆ ಆಗಿದ್ದರು. ಆದರೆ ಮಲತಾಯಿ ಮಗಳನ್ನೇ ಹತ್ಯೆಮಾಡಿ ಜೈಲು ಪಾಲಾಗಿದ್ದಾಳೆ.