ಹಾಸನ : ಹಾಸನಾಂಬೆ ಭಕ್ತರಿಗೆ ಮಹತ್ವದ ಪ್ರಕಟಣೆ ಹೊರಡಿಸಲಾಗಿದ್ದು, ದೇವಾಲಯದ ಆವರಣದಲ್ಲಿ ಪಾದರಕ್ಷೆ ಬಿಡುವುದು ನಿಷೇಧಿಸಲಾಗಿದೆ.
ದೇವಸ್ಥಾನದ ಆವರಣದಲ್ಲಿ ಪಾದರಕ್ಷೆ ಬಿಡುವುದಕ್ಕೆ ಕಟ್ಟುನಿಟ್ಟಾಗಿ ಅವಕಾಶವಿಲ್ಲ.ಹಾಗಾದರೆ ಪಾದರಕ್ಷೆ ಎಲ್ಲಿ ಬಿಡಬೇಕು?
* ಖಾಸಗಿ ವಾಹನದಲ್ಲಿ ಬರುವವರು ವಾಹನದಲ್ಲಿಯೇ ಬಿಟ್ಟು ದರ್ಶನಕ್ಕೆ ಬನ್ನಿ.
*ಪಾರ್ಕಿಂಗ್ ಸ್ಥಳಗಳಲ್ಲಿ ಬಿಡಬಹುದು.
*ಬಸ್ ನಿಲ್ದಾಣದಲ್ಲಿ ಮತ್ತು ರೇಲ್ವೆ ಸ್ಟೇಶನ್ ನಲ್ಲಿ ವಿಶೇಷ ಪಾದರಕ್ಷೆ ಸ್ಟಾಂಡ್ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ.
ಹಾಸನಾಂಬ ದೇವಾಲಯದ ಪವಿತ್ರ ಪ್ರಾಂಗಣದಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ ದೇವಿಯ ಸಮೀಪ ಸಾಗಲು ಇಡುವ ಹೆಜ್ಜೆ. ಚಪ್ಪಲಿ ಹಾಗೂ ಪಾದರಕ್ಷೆಗಳನ್ನು ಬಸ್ಸ್ಟ್ಯಾಂಡ್ / ಪಾರ್ಕಿಂಗ್ನಲ್ಲಿರುವ ನಿಗದಿತ ಸ್ಟ್ಯಾಂಡ್ಗಳಲ್ಲಿ ಇಡಬೇಕು. ಇದು ಕೇವಲ ನಿಯಮವಲ್ಲ — ನಮ್ಮ ದೇವಿಗೆ ಸಲ್ಲಿಸುವ ಗೌರವ ಹಾಗೂ ದೇವಾಲಯದ ಪಾವಿತ್ರ್ಯತೆಯನ್ನು ಕಾಪಾಡುವ ನಮ್ಮ ಸಂಪ್ರದಾಯ.ಎಲ್ಲರೂ ಬನ್ನಿ, ಸಂಪ್ರದಾಯವನ್ನು ಪಾಲಿಸಿ, ಪಾವಿತ್ರ್ಯವನ್ನು ಕಾಪಾಡಿ, ಹಾಸನಮ್ಮನ ಆಶೀರ್ವಾದವನ್ನು ನಿಜವಾದ ಭಕ್ತಿಯಿಂದ ಪಡೆಯೋಣ ಎಂದು ಪ್ರಕಟಣೆ ಹೊರಡಿಸಿದೆ.