ತುಮಕೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ತುಮಕೂರಿನಲ್ಲಿಯೂ ಎಫ್ಐಆರ್ ದಾಖಲಿಸಲಾಗಿದೆ.
ಮಂಡ್ಯ ಜಿಲ್ಲೆಯ ಮದ್ದೂರಿನ ಬಳಿಕ ತುಮಕೂರಿನಲ್ಲಿ ಯತ್ನಾಳ್ ವಿರುದ್ಧ ಕೇಸು ದಾಖಲಾಗಿದೆ. ಶನಿವಾರ ನಡೆದ ಹಿಂದೂ ಮಹಾಗಣಪತಿ ಶೋಭಾ ಯಾತ್ರೆಯಲ್ಲಿ ಯತ್ನಾಳ್ ಭಾಷಣ ಮಾಡಿದ್ದರು. ಪ್ರಚೋದನಕಾರಿ ಭಾಷಣ ಮಾಡಿ ಅನ್ಯಕೋಮಿನ ಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮದ್ದೂರಿನಲ್ಲಿ ನನ್ನ ವಿರುದ್ಧ 70ನೇ ಪ್ರಕರಣ ದಾಖಲಿಸಿದ್ದು, ತುಮಕೂರಿನಲ್ಲಿ 71ನೇ ಪ್ರಕರಣ ದಾಖಲಾಗಬಹುದು ಎಂದು ಶನಿವಾರ ನಡೆದ ಹಿಂದೂ ಮಹಾ ಗಣಪತಿ ಶೋಭಾ ಯಾತ್ರೆಯಲ್ಲಿ ಭಾಷಣ ಮಾಡಿದ್ದ ಯತ್ನಾಳ್ ಪ್ರಸ್ತಾಪಿಸಿದ್ದರು.