ಬೆಂಗಳೂರು: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಮುಟ್ಟದಂತೆ ಎಸ್ ಐಟಿಗೆ ರಾಜಕೀಯ ಒತ್ತಡವಿದೆ ಎಂದು ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಂಸದ ಬೊಮ್ಮಾಯಿ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿಗೆ ರಾಜಕೀಯ ಒತ್ತಡವಿದೆ. ನಿರೀಕ್ಷೆಗೆ ತಕ್ಕಂತೆ, ಪೊಲೀಸ್ ಪದ್ಧತಿ ಪ್ರಕಾರ ತನಿಖೆ ನಡೆಯುತ್ತಿಲ್ಲ ಎಂದು ಹೇಳಿದರು.
ಮಾಸ್ಕ್ ಮ್ಯಾನ್ ದೂರು ಹುಸಿಯಾದ ಬಳಿಕ ಬೇರೆ ಬೇರೆ ದೂರುಗಳು ದಾಖಲಾಗುತ್ತಿವೆ. ಎಸ್ ಐಟಿಗೆ ಉತ್ತರದಾಯಿತ್ವವಿದೆ. ಜವಾಬ್ದಾರಿ ಇದೆ. ಎಸ್ ಐಟಿಯವರು ಷಡ್ಯಂತ್ರ ಮಾಡಿದ ಮುಖ್ಯವ್ಯಕ್ತಿಗಳನ್ನೇ ಇನ್ನೂ ಮುಟ್ಟಿಲ್ಲ. ಎಸ್ ಐಟಿಯವರು ನಮ್ಮನ್ನು ಮುಟ್ಟಲ್ಲ ಎಂಬುದು ಅವರಿಗೂ ಖಾತ್ರಿಯಾಗಿದೆ. ಅದಕ್ಕಾಗಿಯೇ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಹೊಸ ಹೊಸ ದೂರುಗಳು ಬರುತ್ತಿವೆ. ಅವುಗಳನ್ನು ತನಿಖೆ ಮಾಡುತ್ತಿದ್ದಾರೆ. ಎಸ್ ಐಟಿಯವರು ಈವರೆಗೆ ನಡೆಸಿರುವ ತನಿಖೆ ಬಗ್ಗೆ ವರದಿ ನೀಡಲಿ ಎಂದು ಹೇಳಿದರು.