ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳು ತಮ್ಮ ನಾಲಿಗೆ ಮೇಲಿನ ಹಿಡಿತ ಕಳೆದುಕೊಂಡಂತಿದೆ. ಬಾಯಿಗೆ ಬಂದಂತೆ ಮಾತನಾಡುವುದು, ಅಧಿಕಾರಿಗಳು, ಮಹಿಳಾ ಅಧಿಕಾರಿಗಳನ್ನು ಅವಾಚ್ಯವಾಗಿ, ಕೆಟ್ಟ ಪದಳಿಂದ ನಿಂದಿಸುವುದು, ಮನಬಂದಂತೆ ಹೇಳಿಕೆಗಳನ್ನು ನೀಡಿ ಸಮರ್ಥಿಸಿಕೊಳ್ಳುವುದು… ಇದನ್ನೆಲ್ಲ ನೋಡಿದರೆ ಕೆಲ ಶಾಸಕ, ಸಚಿವರು, ಎಂ ಎಲ್ ಸಿಗಳಿಗೆ ತಾವು ಏನು ಮಾತನಡುತ್ತಿದ್ದೇವೆ? ಜನರು ತಮ್ಮನ್ನು ಯಾಕೆ ಆಯ್ಕೆ ಮಾಡಿದ್ದಾರೆ? ತಮ್ಮ ಕೆಲಸವೇನು ಎಂಬ ವಿಚಾರ, ವಿವೇಚನೆಯನ್ನು ಕಳೆದುಕೊಂಡಂತೆ ಕಾಣುತ್ತಿದೆ.
ದಾವಣಗೆರೆ ಎಸ್ ಪಿ ಉಮಾ ಪ್ರಶಾಂತ್ ಅವರನ್ನು ಪೊಮೇರಿಯನ್ ನಾಯಿಗೆ ಹೋಲಿಸಿ ಮಾತನಾಡಿದ್ದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ಎಸ್ ಪಿಗೆ ನಾನು ಪೊಮೇರಿಯನ್ ನಾಯಿ ಎಂದು ಹೇಳಿಲ್ಲ. ಪೊಮೇರಿಯನ್ ನಾಯಿ ಮರಿಗಳಂತೆ ಅಧಿಕಾರಿಗಳು ಉಸ್ತುವಾರಿ ಸಚಿವರ ಹಿಂದೆ ಸುತ್ತುತ್ತಿದ್ದಾರೆ ಎಂದು ಹೇಳಿದ್ದೇನೆ. ಎಸ್ ಪಿ ಉಮಾ ಪ್ರಶಾಂತ್ ಗೆ ಬೇಸರವಾಗಿದ್ದರೆ ನಾನೇನೂ ಮಾಡಲು ಆಗಲ್ಲ ಎಂದಿದ್ದಾರೆ.
ಇದೇ ವೇಳೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನನಗೆ ಡಾಬರ್ ಮನ್ ನಾಯಿ ಅಂದಿದ್ದಾರೆ. ನಾನು ಭ್ರಷ್ಟರ ಪಾಲಿಗೆ ಡಾಬರ್ ಮನ್ ನಾಯಿಯೇ. ಸಚಿವರಿಗೆ ಸ್ವಲ್ಪ ಹುಷಾರಾಗಿರಲು ಹೇಳಿ. ಡಾಬರ್ ಮನ್ ನಾಯಿ ಬಾಯಿ ಹಾಕಿದರೆ ಎಲ್ಲಿ ಹಾಕುತ್ತದೆ ಅವರ್ಗೆ ಗೊತ್ತಿದೆ. ನಾನು ಅಷ್ಟು ಸುಲಭಕ್ಕೆ ಬಿಡುವ ಮನುಷ್ಯನಲ್ಲ ಎಂದು ಹೇಳಿದ್ದಾರೆ.
ನಾನು ಶಾಮನೂರು ಕುಟುಂಬದವರ ವಿರುದ್ಧ ನಿರಂತರವಾಗಿ ಹೋರಾಟ ಮಾಡಿ ಗೆದ್ದಿದ್ದೇನೆ. ಈ ಹಿಂದೆ ಜಿಂಕೆ ಕೇಸ್ ನಲ್ಲಿ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ಒಪ್ಪಂದ ಮಾಡಿಕೊಂಡು ಉಳಿದುಕೊಂಡರು. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ ಎಂದಿದ್ದಾರೆ.