ಬೆಂಗಳೂರು: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿಂದು ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ, ಭಾರತ-ಪಾಕಿಸ್ತಾನ ಪಂದ್ಯ ರದ್ದು ಮಾಡಬೇಕಿತ್ತು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬೊಮ್ಮಾಯಿ, ಭಾರತ-ಪಾಕ್ ಪಂದ್ಯ ರದ್ದು ಮಾಡಬೇಕಿತ್ತು ಎಂಬುದು ನನ್ನ ಅಭಿಪ್ರಾಯ. ಪಹಲ್ಗಾಮ್ ನಲ್ಲಿ ನಡೆದ ಹತ್ಯಾಕಾಂಡ ಇನ್ನೂ ಮಾಸಿಲ್ಲ. ಕ್ರೀಡೆ ಮುಖ್ಯ ನಿಜ. ಆದರೆ ಜನರ ಭಾವನೆ ಅದಕ್ಕಿಂತಲೂ ಮುಖ್ಯ. ದೇಶದ ಜನರ ಭಾವನೆಗೆ ಧಕ್ಕೆತರುವಂತೆ ಮಾಡಬಾರದು ಎಂದು ಹೇಳಿದರು.