ಬೀದರ್: ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಅಶ್ಲೀಲ ವಿಡಿಯೋ ಕಳುಹಿಸಿ 30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ.
ವಿಕಾಸ್ ಪವಾರ್ ಬಂಧಿತ ಆರೋಪಿ. ಬೀದರ್ ನ ನಂದಿಬಿಜಲಗಾಂವ್ ತಾಂಡಾ ನಿವಾಸಿ. ಆರೋಪಿ ವಿಕಾಸ್ ನನ್ನು ಹೈದರಾಬಾದ್ ನಲ್ಲಿ ಬಂಧಿಸಲಾಗಿದೆ.
ವಿಕಾಸ್, ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಚೌವ್ಹಾಣ್ ಹಾಗೂ ಯುವತಿಯೊಬ್ಬಳ ಫೋಟೋ ಇರುವ ಎಡಿಟೆಡ್ ವಿಡಿಯೋ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ಹಾಕದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಈ ಬಗ್ಗೆ ಹೊಕ್ರಾಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
You Might Also Like
TAGGED:ಪ್ರಭು ಚೌವ್ಹಾಣ್