ನವದೆಹಲಿ: ಜನೌಷಧ ಕೇಂದ್ರಗಳ ಸ್ಥಾಪನೆ ನಿಯಮವನ್ನು ಕೇಂದ್ರ ಸರ್ಕಾರ ಸಡಿಲಿಕೆ ಮಾಡಿದೆ. ಮಹಾನಗರಗಳಲ್ಲಿನ ಎರಡು ಜನೌಷಧ ಕೇಂದ್ರಗಳ ನಡುವೆ ಕನಿಷ್ಠ ಒಂದು ಕಿಲೋಮೀಟರ್ ಅಂತರವಿರಬೇಕು ಎನ್ನುವ ನಿಯಮವನ್ನು ಕೇಂದ್ರ ಸರ್ಕಾರ ಸಡಿಲಿಕೆ ಮಾಡಿದೆ.
ದೆಹಲಿ, ಮುಂಬೈ, ಕೊಲ್ಕತ್ತಾ, ಬೆಂಗಳೂರು, ಚೆನ್ನೈ, ಹೈದರಾಬಾದ್, ಅಹಮದಾಬಾದ್ ನಂತಹ ಮೆಟ್ರೋಪಾಲಿಟನ್ ನಗರಗಳಲ್ಲಿ ಮತ್ತು 2011ರ ಜನಗಣತಿ ಪ್ರಕಾರ 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ 46 ನಗರ ಮತ್ತು ಪಟ್ಟಣಗಳಲ್ಲಿ ಹೆಚ್ಚು ಜನೌಷಧ ಕೇಂದ್ರಗಳ ಸ್ಥಾಪನೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಇನ್ನುಳಿದ ಪ್ರದೇಶಗಳಲ್ಲಿ ಜನೌಷಧ ಕೇಂದ್ರಗಳ ನಡುವೆ ಎಂದಿನಂತೆ ಒಂದು ಕಿಲೋಮೀಟರ್ ಅಂತರ ಇರಬೇಕೆನ್ನುವ ನಿಯಮ ಮುಂದುವರೆಯಲಿದೆ. 2014ರಲ್ಲಿ ಜನೌಷಧದ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಆಗ ದೇಶದಲ್ಲಿ 80 ಜನೌಷಧ ಕೇಂದ್ರಗಳು ಇದ್ದವು. ಈಗ 16,912 ಜನೌಷಧ ಕೇಂದ್ರಗಳು ಇವೆ.