ಬೆಂಗಳೂರು: ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳ(ಆರ್.ಟಿ.ಒ) ಕಾರ್ಯನಿರ್ವಹಣೆಗೆ ನೂತನ ವಾಹನ್ ತಂತ್ರಾಂಶ ಅಳವಡಿಸಲಾಗಿದೆ.
ಹೀಗಾಗಿ ಇನ್ನು ಮುಂದೆ ವಾಹನಗಳ ಕ್ಲಿಯರೆನ್ಸ್ ಪ್ರಮಾಣ ಪತ್ರ ಮತ್ತು ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯಲು ಸೂಕ್ತ ಮಾಹಿತಿ ನೀಡುವುದು ಕಡ್ಡಾಯ ಎಂದು ಸಾರಿಗೆ ಇಲಾಖೆ ಸೂಚನೆ ನೀಡಿದೆ.
ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದ ಆರ್.ಟಿ.ಒ. ಕಚೇರಿಗಳ ಕಾರ್ಯನಿರ್ವಹಣೆಗೆ ಕೇಂದ್ರೀಕೃತ ವಾಹನ್ ತಂತ್ರಾಂಶ ಅಳವಡಿಸಲಾಗಿದೆ. ನೂತನ ತಂತ್ರಾಂಶದಲ್ಲಿ ವಾಹನದ ಹಾರ್ಸ್ ಪವರ್, ಕ್ಯೂಬಿಕ್ ಕೆಪಾಸಿಟಿ, ವೀಲ್ ಬೇಸ್, ಹಣದ ಮೊತ್ತ ಸೇರಿ ಮತ್ತಿತರ ಮಾಹಿತಿಗಳನ್ನು ನಮೂದಿಸಬೇಕಿದೆ. ಒಂದು ವೇಳೆ ಮಾಹಿತಿಗಳು ನಮೂದಾಗದಿದ್ದಲ್ಲಿ ವಾಹನಗಳಿಗೆ ಕ್ಲಿಯರೆನ್ಸ್ ಪ್ರಮಾಣ ಪತ್ರ ಮತ್ತು ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗುವುದಿಲ್ಲ.
ಹೀಗಾಗಿ ಎಲ್ಲಾ ವಾಹನ ಮಾಲೀಕರು ಕೂಡಲೇ ತಮ್ಮ ವಾಹನದ ದಾಖಲೆಗಳನ್ನು ಸಂಬಂಧಿಸಿದ ಸಾರಿಗೆ ಇಲಾಖೆ ಕಚೇರಿಗೆ ಹಾಜರುಪಡಿಸಿ ವಾಹನದ ಮಾಹಿತಿ ಅಪ್ ಡೇಟ್ ಮಾಡಿಕೊಳ್ಳಬೇಕೆಂದು ಹೇಳಲಾಗಿದೆ.