ಬೀದರ್ : ಪತ್ನಿ ಬಿಟ್ಟು ಹೋಗಿದ್ದಕ್ಕೆ ಸೇತುವೆಯಿಂದ ಜಿಗಿದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಸಿತೂಗಾಂವ್ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಪ್ರಭಾಕರ್ ಸೂರ್ಯವಂಶಿ (38) ಎಂದು ಗುರುತಿಸಲಾಗಿದೆ. 30 ಅಡಿಯ ಬ್ರಿಡ್ಜ್ ಮೇಲಿಂದ ನದಿಗೆ ಹಾರಿದ್ದಾರೆ. ಸ್ಥಳೀಯರ ಮೊಬೈಲ್ ನಲ್ಲಿ ಈ ದೃಶ್ಯ ಸೆರೆಯಾಗಿದೆ.
ಕೆಲವು ವರ್ಷಗಳ ಹಿಂದೆ ಪ್ರಭಾಕರ್ ಹೆಂಡತಿ ಮತ್ತು ಮಕ್ಕಳು ಮನೆ ಬಿಟ್ಟು ಹೋಗಿದ್ದರು. ಇದರಿಂದ ಕೆಲವು ಸಮಯದಿಂದ ಮದ್ಯದ ದಾಸನಾಗಿದ್ದ ಪ್ರಭಾಕರ್ ಸೂಸೈಡ್ ಮಾಡಿಕೊಂಡಿದ್ದಾನೆ.