ಹೈದರಾಬಾದ್: ಮನೆಗೆ ನುಗ್ಗಿದ ಕಳ್ಳನೊಬ್ಬ ಮಹಿಳೆಯ ಕೈಕಾಲು ಕಟ್ಟಿಹಾಕಿ ತಲೆಗೆ ಕುಕ್ಕರ್ ನಿಂದ ಹೊಡೆದು ಬಳಿಕ ಗಂಟಲು ಸೀಳಿ ಕೊಲೆಗೈದು, ಚಿನ್ನಾಭರಣ ದೋಚಿ, ಬಾತ್ ರೂಮ್ ಗೆ ಹೋಗಿ ಸ್ನಾನ ಮಾಡಿಕೊಂಡು ಬಳಿಕ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.
ಹೈದರಾಬಾದ್ ನಲ್ಲಿ ಈ ಘಟನೆ ನಡೆದಿದೆ. ಇಬ್ಬರು ಕಳ್ಳರು ಮನೆಗೆ ನುಗ್ಗಿ, ಮಹಿಳೆಯನ್ನು ಕೊಂದು, ಬಾತ್ ರೂಂ ನಲ್ಲಿ ಸ್ನಾನ ಮಾಡಿ ರಕ್ತಸಿಕ್ತ ಬಟ್ಟೆಗಳನ್ನು ಬಿಟ್ಟು ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದಾರೆ.
ರೇಣು ಅಗರ್ವಾಲ್ (50) ಎಂಬ ಮಹಿಳೆ ತನ್ನ ಪತಿ ಹಾಗೂ ಮಗನೊಂದಿಗೆ ಸೈಬರಾಬಾದ್ ನ ಐಟಿ ಕೇಂದ್ರದಲ್ಲಿರುವ ಗೇಟೆಡ್ ಸಮುದಾಯದ ಸ್ವಾನ್ ಲೇಕ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ಬೆಳಿಗ್ಗೆ ಅಗರ್ವಾಲ್ ತನ್ನ ಮಗನ ಜೊತೆ ಕಚೇರಿಗೆ ಕೆಲಸಕ್ಕೆ ತೆರಳಿದ್ದಾರೆ. ಪತ್ನಿ ರೇಣುಗೆ ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸದಾಗ ಗಾಬರಿಯಾಗಿ ಬೇಗನೇ ಕೆಲಸಮುಗಿ ಮನೆಗೆ ಬಂದಿದ್ದಾರೆ. ಬಾಗಿಲು ಲಾಕ್ ಆಗಿತ್ತು. ಬಾಲ್ಕನಿಯಿಂದ ಹೋಗಿ ಬಾಗಿಲು ತೆರೆದು ನೋಡಿದಾಗ ಪತ್ನಿ ರೇಣು ಕೊಲೆಯಾದ ಸ್ಥಿತಿಯಲ್ಲಿ ರಕ್ತದ ಮಡುವಲ್ಲಿ ಬಿದ್ದಿದ್ದರು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ರೇಣು ಅವರನ್ನು ಕೊಲೆಗದ ಕಳ್ಳರು ಮನೆಯಲ್ಲಿದ್ದ 40 ಗ್ರಾಮ್ ಚಿನ್ನ, 1 ಲಕ್ಷ ನಗದು ಹಣವನ್ನು ದೋಚಿ ಎಸ್ಕೇಪ್ ಆಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.