ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಮತ್ತು ಕುಟುಂಬದ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇರೆಗೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ನಿರ್ದೇಶಕ ಎಸ್. ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು ನನ್ನ ಮನೆಯಲ್ಲಿ 8 ಮಂದಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಮನೆಯ ಹೆಣ್ಣು ಮಕ್ಕಳು ದುಡಿಯುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದ್ದಾರೆ.
ನಮ್ಮ ಸೊಸೆ ಪವಿತ್ರ ಮನೆ ಬಿಟ್ಟು ಹೋಗಿ 14 ತಿಂಗಳಾಯಿತು. ವರದಕ್ಷಿಣೆ ಪಿಡುಗು ತೊಲಗಲಿ ಅಂತ ಸಿನಿಮಾ ಮಾಡಿದವನು ನಾನು, ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ವರದಕ್ಷಿಣೆ ಕೇಸನ್ನ ಮಹಿಳೆಯರು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು.
ಪವಿತ್ರ ಹಾಗೂ ಪವನ್ ಪ್ರೀತಿಸಿ ಮದುವೆಯಾಗಿದ್ದರು. ಅವರ ಪ್ರೀತಿಗೆ ನಾವು ಅಡ್ಡಿ ಬಂದಿರಲಿಲ್ಲ ಅವರ ಮನೆಯ ಹಿರಿಯರನ್ನು ಕರೆದು ಬುದ್ದಿ ಹೇಳಿದ್ದೆವು. ಆದರೆ ಯಶಸ್ವಿ ಆಗಲಿಲ್ಲ. ನಮ್ಮ ಸೊಸೆ ಪವಿತ್ರ ಮನೆ ಬಿಟ್ಟು ಹೋಗಿ 14 ತಿಂಗಳಾಯಿತು ಎಂದರು. ಹೇಗಾದರೂ ಅವರಿಗೆ ತೊಂದರೆ ಕೊಡೋಣ ಅಂತ 1 ವರ್ಷ ಆದ ಬಳಿಕ ದೂರು ಕೊಟ್ಟಿದ್ದಾರೆ. ನಾವು ಕೂಡ ಕೋರ್ಟ್ ಗೆ ಹೋಗುತ್ತೇವೆ, ಗೆಲ್ಲುವ ವಿಶ್ವಾಸ ನಮಗಿದೆ ಎಂದರು.