ಬೆಂಗಳೂರು : ಕನ್ನಡ ಚಿತ್ರರಂಗದ ನಿರ್ದೇಶಕ ಎಸ್. ನಾರಾಯಣ್ ಮತ್ತು ಕುಟುಂಬದ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇರೆಗೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್. ನಾರಾಯಣ್ ಸೊಸೆ ಪವಿತ್ರ ಈ ಗಂಭೀರ ಆರೋಪ ಮಾಡಿದ್ದಾರೆ. ಪವಿತ್ರ ಹಾಗೂ ಎಸ್ ನಾರಾಯಣ್ ಪುತ್ರ ಪವನ್ 2021 ರಲ್ಲಿ ಮದುವೆ ಆಗಿದ್ದರು. ಪವಿತ್ರಾ, ತನ್ನ ಪತಿ ಹಾಗೂ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದು, ಹಣಕ್ಕಾಗಿ ಪೀಡಿಸುತ್ತಿದ್ದಾರೆ . ಮತ್ತು ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪ ಪ್ರಕರಣದಲ್ಲಿ ಪವನ್ ಮೊದಲ ಆರೋಪಿ ಆಗಿದ್ದು, ಎಸ್ ನಾರಾಯಣ್ ಎ-2 ಆರೋಪಿ ಆಗಿದ್ದಾರೆ.
ನನ್ನ ಮದುವೆ ಅವಧಿಯಲ್ಲಿ 1 ಲಕ್ಷದ ಉಂಗುರ ಹಾಗೂ ಖರ್ಚು ವೆಚ್ಚದ ಹಣ ಪಡೆದಿದ್ದಾರೆ. ನನ್ನ ಪತಿ ಪವನ್ ಓದಿರಲಿಲ್ಲ, ಎಲ್ಲಿಯೂ ಕೂಡ ಕೆಲಸ ಸಿಕ್ಕಿರಲಿಲ್ಲ. ನಾನೇ ಎಲ್ಲಾ ಕೆಲಸ ಮಾಡಿ ಮನೆಯ ಸಂಸಾರ ಸಾಗಿಸುತ್ತಿದ್ದೆನು. ಇದರ ನಡುವೆ ಫಿಲ್ಮ್ ಇನ್ಸ್ಟಿಟ್ಯೂಟ್ ಕೂಡ ಆರಂಭಿಸಲಾಗಿತ್ತು. ಇದನ್ನ ಶುರು ಮಾಡಲು ಪವನ್ ನಮ್ಮ ಬಳಿ ಹಣ ಕೇಳಿದ್ದರು. ಆಗ ನಾವು ಒಡವೆಗಳನ್ನು ಅಡ ಇಟ್ಟು ಹಣ ಕೊಟ್ಟಿದ್ದೆವು. ನಂತರ ಸಂಸ್ಥೆ ನಷ್ಟದಲ್ಲಿ ಮುಳುಗಿತು. ಆಗ ನಾವು 10 ಲಕ್ಷ ರೂ ಹಣವನ್ನು ಪವನ್ ಗೆ ನೀಡಿದ್ದೆವು. ಇದಾದ ನಂತರವೂ ಪವನ್ ಹಾಗೂ ಅವರ ತಂದೆ, ತಾಯಿ ನನಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದಾರೆ.